ಕಟಪಾಡಿಯಲ್ಲಿ "ಬಲೆ ತುಲು ಲಿಪಿ ಕಲ್ಪುಗ” ತುಳು ಭಾಷಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
Posted On:
10-10-2024 10:31AM
ಕಟಪಾಡಿ : ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜು ಹಾಗೂ ಜೈ ತುಲುನಾಡ್(ರಿ.) ವತಿಯಿಂದ “ಬಲೆ ತುಲು ಲಿಪಿ ಕಲ್ಪುಗ” ತುಳು ಭಾಷಾ ತರಬೇತಿಯ ಕಾರ್ಯಕ್ರಮಕ್ಕೆ ತ್ರಿಶಾ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.
ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ನಾರಾಯಣ್ ರಾವ್ ಮಾತನಾಡಿ ಇಂದು ಭಾಷೆಯನ್ನು ಕಲಿಯಲು ಹಲವಾರು ಆಧುನಿಕ ತಂತ್ರಜ್ಞಾನಗಳಿವೆ. ಆದರೆ ನಿಜವಾಗಿಯೂ ಭಾಷೆ ಕಲಿಯುವುದೆಂದರೆ ಸಂಸ್ಕೃತಿ, ಭಾಷೆಯ ಇತಿಹಾಸ, ಪರಂಪರೆಯನ್ನು ಕೂಡ ಕಲಿಯುದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಟಕ ರಚನೆಕಾರ, ನಟ, ನಿರ್ದೇಶಕ, ರವಿಕುಮಾರ್ ಕಡೆಕಾರ್ ಮಾತನಾಡಿ, ನಾವು ಎಲ್ಲಾ ಭಾಷೆಗಳನ್ನು ಕಲಿಯಬೇಕು. ಜೊತೆಗೆ ಗೌರವಿಸಬೇಕು. ಆದರೆ ನಮಗೆ ಜನ್ಮ ಕೊಟ್ಟಂತಹ ಈ ತುಳುನಾಡಿನ ಭಾಷೆಯ ಅಭಿಮಾನವನ್ನು ಬೆಳೆಸಿಕೊಳ್ಳುವುದು ಅತೀ ಅಗತ್ಯವಾಗಿದೆ. ನಾವೆಲ್ಲರೂ ಸೇರಿ ನಮ್ಮ ತಾಯಿನಾಡಿನ ಭಾಷೆಯನ್ನು ಉಳಿಸಿಕೊಳ್ಳೋಣ ಆಗ ಮಾತ್ರ ತುಳು ಭಾಷೆ ರಾಷ್ಟ್ರೀಯ ಮಾನ್ಯತೆಯನ್ನು ಪಡೆದುಕೊಳ್ಳಲು ಸಾಧ್ಯ ಎಂದರು.
ಜೈ ತುಲುನಾಡ್ (ರಿ.) ಸಂಘದ ಅಧ್ಯಕ್ಷರಾದ ಉದಯ ಪುಂಜಾರವರು ಮಾತನಾಡಿ, ಈಗಿನಿಂದಲೇ ತುಳು ಭಾಷೆ ಲಿಪಿಯನ್ನು ಕಲಿತರೆ ಅದನ್ನು ಮುಂದಿನ ಜನಾಂಗಕ್ಕೂ ಕಲಿಸಬಹುದು. ಆಗ ಮಾತ್ರ ಎಲ್ಲರಿಗೂ ತುಳು ಭಾಷೆ, ತುಳು ಲಿಪಿಯ ಅರಿವು ಮೂಡಲು ಸಾಧ್ಯವಾಗುವುದರೊಂದಿಗೆ ನಮ್ಮ ಭಾಷೆಯನ್ನು ಕಲಿತ ಹೆಮ್ಮೆಯೂ ನಮಗೆ ಇರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ವಿಫ್ನೇಶ್ ಶೆಣೈ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಜೈ ತುಲುನಾಡು(ರಿ.)ಸಂಘದ ತುಳು ಲಿಪಿ ಬೋಧಕರಾದ ಸಂತೋಷ್.ಎನ್.ಎಸ್ ಕಟಪಾಡಿ ಹಾಗೂ ಸುಶೀಲ ಜಯಕರ್ ಕೊಡವೂರ್, ಸ್ಥಾಪಕ ಸದಸ್ಯರಾದ ಶರತ್ ಕೊಡವೂರ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಾಗರ್ ಬನ್ನಂಜೆ, ವಿಶಾಂತ್ ಉದ್ಯಾವರ, ಸಂಘದ ಸದಸ್ಯರಾದ ಅಕ್ಷತಾ ಕುಲಾಲ್, ಸುಪ್ರಿಯಾ ಕೊಡವೂರ್,ದೀಪಕ್ ಉದ್ಯಾವರ ,ಸಂತೋಷ್ ನಿಟ್ಟೆ ಹಾಗೂ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಧ್ಯಾಪಕರಾದ ರಾಮದಾಸ್ ನಾಯಕ್ ಮತ್ತು ಶಿಕ್ಷಕ ವೃಂದದವರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತ್ರಿಶಾ ವಿದ್ಯಾ ಕಾಲೇಜ್ ನ ಸಂಸ್ಕೃತ ಪ್ರಾಧ್ಯಾಪಕ ರಾದ ವಾಗೇಶ್ ಅವರು ಸ್ವಾಗತಿಸಿ, ಶ್ವೇತಾ ರವರು ಕಾರ್ಯಕ್ರಮ ನಿರೂಪಿಸಿದರು. ಶ್ರಾವ್ಯ.ಜೆ. ಶೆಟ್ಟಿ ವಂದಿಸಿದರು.