ಪಡುಬಿದ್ರಿ : ಇಂದಿನ ಯುವ ಜನತೆ ಸಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡುವ ಈ ಸಂದರ್ಭದಲ್ಲಿ ಬಪ್ಪನಾಡು ಶ್ರೀ ದುರ್ಗ ಮಾತೆಯ ಪುರಾತನ ಕಥೆಯುಳ್ಳ ಇತಿಹಾಸ ನೆನಪಿಸುವಂತಹ ಭಕ್ತಿ ಪ್ರಧಾನ ವೀಡಿಯೋ ಅಲ್ಬಮ್ ಅನ್ನು ನಿರ್ಮಿಸಿದ್ದು ಶ್ಲಾಘನೀಯ. ಅಲ್ಬಮ್ ಸಾಂಗ್ ಅದ್ದೂರಿ ಯಶಸ್ಸಿಯಾಗಿ ನಡೆಯಲಿ, ಮುಂದೆ ಈ ತಂಡದಿಂದ ಚಲನಚಿತ್ರ ನಿರ್ಮಾಣಗೊಳ್ಳುವಂತಾಗಲಿ ಎಂದು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ನವೀನಚಂದ್ರ ಜೆ ಶೆಟ್ಟಿ ಹೇಳಿದರು.
ಅವರು ಪಡುಬಿದ್ರಿ ಓಂಕಾರ ಕಲಾ ಸಂಗಮದಲ್ಲಿ ನಡೆದ ಎಸ್.ಜಿ.ಎಸ್ ಕ್ರಿಯೇಷನ್ಸ್ ಪ್ರಸುತ್ತ ಪಡಿಸಿದ "ಶ್ರೀ ಬಪ್ಪನಾಡು ದುರ್ಗೆಯ ಮಹಿಮೆ" ಕನ್ನಡ ವಿಡಿಯೋ ಅಲ್ಬಮ್ ಸಾಂಗ್ ನ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಇನ್ನಷ್ಟು ಧಾರ್ಮಿಕ ಸ್ಥಳಗಳ ಇತಿಹಾಸವನ್ನು ಯುವ ಜನತೆಗೆ ತಿಳಿಸುವಂತಹ ಕಾರ್ಯ ನಡೆಯಲಿ, ವೀಡಿಯೋ ಅಲ್ಬಮ್ ಸಾಂಗ್ ಯಶಸ್ಸು ಕಾಣಲಿ ಎಂದು ಮೀನುಗಾರರ ಕಾಂಗ್ರೆಸ್ ನ ಜಿಲ್ಲಾ ಅಧ್ಯಕ್ಷ ವಿಶ್ವಾಸ್ ಅಮೀನ್ ಶುಭ ಹಾರೃೆಸಿದರು.
ಈ ಸಂದರ್ಭದಲ್ಲಿ ಪೆರ್ಡೂರು ಗ್ರಾ.ಪಂ.ಸದಸ್ಯ ನವೀನ್ ಸಾಲ್ಯಾನ್, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಉಡುಪಿ ಜಿಲ್ಲಾ ಅಧ್ಯಕ್ಷ ರಚನ್ ಸಾಲ್ಯಾನ್, ಪಡುಬಿದ್ರಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಯಶೋಧ ಪಡುಬಿದ್ರಿ, ನಾಯಕಿ ನಟಿ ಸುಪ್ರೀತಾ ಪೂಜಾರಿ ಪಾಂಗಾಳ, ನಿರ್ಮಾಪಕ ಸಂತೋಷ್ ಪಡುಬಿದ್ರಿ, ನಮೃತಾ ಮಹೇಶ್, ಸಂತೋಷ್ ನಂಬಿಯಾರ್, ಪಡುಬಿದ್ರಿ ರೋಟರಿ ಯ ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಕಾರ್ಯದರ್ಶಿ ಹೇಮಲತಾ ಸುವರ್ಣ ಉಪಸ್ಥಿತರಿದ್ದರು.