ಮುದರಂಗಡಿ : ಉಡುಪಿ ಜಿಲ್ಲಾ ಕೃಷಿಕ ಸಂಘ ಆಯೋಜಿಸಿರುವ ವೈಜ್ಞಾನಿಕ ಅಡಿಕೆ ಬೇಸಾಯ ಕೃಷಿ ಮಾಹಿತಿ ಕಾರ್ಯಕ್ರಮ ಅ.14ರಂದು ಸೋಮವಾರ ಸಂಜೆ ಗಂಟೆ 3:30 ಕ್ಕೆ ಮುದರಂಗಡಿ ಮಾಣಿಯೂರು ರಾಜಾಪುರ ಸಾರಸ್ವತ ಸಮುದಾಯ ಭವನದಲ್ಲಿ ನಡೆಯಲಿದೆ.
ನಿವೃತ್ತ ಅಧ್ಯಾಪಕ ವೈ ಉಪೇಂದ್ರ ಪ್ರಭು ಉದ್ಘಾಟಿಸಲಿದ್ದಾರೆ. ಮುದರಂಗಡಿ ಹಾಲು ಉತ್ಪಾದಕರ ಸ. ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಶಿಕುಮಾರ್ ಶೆಟ್ಟಿ ಸಾಂತೂರು ಮತ್ತು ಮಾಣಿಯೂರು ಕೃಷ್ಣರಾಜ ಹೆಗ್ಡೆ ಭಾಗವಹಿಸಲಿದ್ದಾರೆ. ಮಾಹಿತಿದಾರರಾಗಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಮತ್ತು ಪ್ರ. ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಭಾಗವಹಿಸಲಿದ್ದಾರೆ.
ಕಡಿಮೆ ಖರ್ಚು, ಕಡಿಮೆ ಶ್ರಮ, ಕಡಿಮೆ ನೀರು-ಗೊಬ್ಬರ ಬಳಕೆಯಿಂದ ಲಾಭದಾಯಕವಾಗಿ ಅಡಿಕೆ ಕೃಷಿ ಮಾಡುವ ವಿಧಾನ, ನಾಟಿ, ನಿರ್ವಹಣೆ, ಕೀಟ-ರೋಗ ಬಾಧೆ ಹತೋಟಿ ಕ್ರಮಗಳನ್ನು ತಿಳಿಸಿಕೊಡುವ ಈ ಕಾರ್ಯಕ್ರಮದಲ್ಲಿ ಕೃಷಿಕರು, ಕೃಷಿ ಆಸಕ್ತ ಬಾಂಧವರು ಭಾಗವಹಿಸುವಂತೆ ಕಾರ್ಯಕ್ರಮ ಸಂಘಟಕರಾದ ಮುರಳೀಧರ ಪ್ರಭು, ಶಂಕರ ಕೇಂಜ ಮತ್ತು ಜೋನ್ ಅಮ್ಮಣ್ಣ ಮುದರಂಗಡಿ ಮತ್ತು ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.