ಬಂಟಕಲ್ಲು : ವಾಹನಗಳನ್ನು ಚಲಾಯಿಸುವಾಗ ಸಾರಿಗೆ ನಿಯಮವನ್ನು ಪಾಲಿಸುವುದರೊಂದಿಗೆ ಶ್ರಧ್ಧಾ ಭಕ್ತಿಯಿಂದ ವಾಹನ ಚಲಾಯಿಸಿದರೆ ಅಫಘಾತರಹಿತವಾಗಿ ಸುರಕ್ಷಿತ ಚಾಲನೆ ಸಾಧ್ಯವಾಗುವುದು ಎಂದು ಶಿರ್ವ ಪೊಲೀಸ್ ಠಾಣಾಧಿಕಾರಿ ಶಕ್ತೀವೇಲುರವರು ತಿಳಿಸಿದರು. ಅವರು ಬಂಟಕಲ್ಲು ರಾಜಾಪುರ ಸಾರಸ್ವತ ಸೇವಾ ವೃಂದದ ಆಶ್ರಯದಲ್ಲಿ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ 9 ನೇ ವರ್ಷದ ಸಾಮೂಹಿಕ ವಾಹನ ಪೂಜೆಗೆ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣುವ ವಾಹನ ಪೂಜೆಯು ವಾಹನಗಳ ಮೇಲಿನ ಶ್ರದ್ಧೆ, ಭಕ್ತಿಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು.
ದೇವಸ್ಥಾನದ ಆಡಳಿತ ಮಂಡಳಿಯ ಆಡಳಿತ ಮೋಕ್ತೇಸರರಾದ ಜಯರಾಮ ಪ್ರಭು, ಬೆಳ್ಳೆ ಗ್ರಾ. ಪಂ. ಉಪಾಧ್ಯಕ್ಷರಾದ ಶಶಿಧರ ವಾಗ್ಲೆಯವರು ಶುಭಹಾರೈಸಿದರು.
ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಉಮೇಶ್ ಪ್ರಭು, ಹಿರಿಯ ಶಿಕ್ಷಕ ಪುಂಡಲೀಕ ಮರಾಠೆ, ನಿವೃತ್ತ ಶಿಕ್ಷಕ ದಯಾನಂದ ಕಾಮತ್, ಬಂಟಕಲ್ಲು ಕಾರು ಚಾಲಕ ಮಾಲಕ ಸಂಘದ ಅಧ್ಯಕ್ಷ ಉಮೇಶ್ ರಾವ್, ಆಡಳಿತ ಮಂಡಳಿಯ ದೇವದಾಸ ಪಾಟ್ಕರ್, ರಾಮದಾಸ ಪ್ರಭು, ನಿವೃತ್ತ ಯೋಧ ರಾಜೇಂದ್ರ ಪಾಟ್ಕರ್, ಅಂಗನವಾಡಿ ಶಿಕ್ಷಕಿ ವಿನಯಾ ಕುಂದರ್, ಉದ್ಯಮಿ ರಾಘವೇಂದ್, ನಾಯಕ್, ಅನಂತರಾಮ ವಾಗ್ಲೆ, ಆಶಿಷ್ ಪಾಟ್ಕರ್, ವಿರೇಂದ್ರ ಪಾಟ್ಕರ್ ಉಪಸ್ಥಿತರಿದ್ದರು.
ಅರ್ಚಕ ಶ್ರೀಕಾಂತ ಭಟ್ ಗೋವು ಪೂಜೆಯ ಬಳಿಕ ಧಾರ್ಮಿಕ ಪೂಜಾವಿಧಾನಗಳನ್ನು ನಡೆಸಿಕೊಟ್ಟರು. ರಾ.ಸಾ ಸೇವಾ ವೃಂದದ ಅಧ್ಯಕ್ಷ ಕೆ ಆರ್ ಪಾಟ್ಕರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ವೃಂದದ ಕಾರ್ಯದರ್ಶಿ ವಿಶ್ವನಾಥ ಬಾಂದೇಲ್ಕರ್ ವಂದಿಸಿದರು. ನೂರಕ್ಕೂ ಮಿಕ್ಕಿದ ವಿವಿಧ ವಾಹನಗಳು ಪೂಜಿಸಲ್ಪಟ್ಟವು.