ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ : 3ನೇ ಬೃಹತ್ ಉದ್ಯೋಗ ಮೇಳ ಸಂಪನ್ನ

Posted On: 17-11-2024 10:15PM

ಕಟಪಾಡಿ : ‌ಮಣಿಪುರ ಕುಂತಳನಗರದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಇದರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಆಯೋಜನೆಯ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ನಡೆದ ಉಚಿತ 3ನೇ ಬೃಹತ್ ಉದ್ಯೋಗ ಮೇಳದ ಸಮಾರೋಪ ಕಾರ್ಯಕ್ರಮ ಭಾನುವಾರ ಉಡುಪಿ ಗ್ರಾಮೀಣ ಬಂಟರ ಸಂಘದ ಸಭಾಭವನದಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ಕಾಪು ಕ್ಷೇತ್ರದ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿ, ಮಾತನಾಡಿ ಉತ್ತಮ ಶಿಕ್ಷಣದೊಂದಿಗೆ ಉದ್ಯೋಗವೂ ಅನಿವಾರ್ಯ. ಉದ್ಯೋಗದ ಅವಕಾಶ ಒದಗಿಸುತ್ತಿರುವ ಉಡುಪಿ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಪ್ರಾಮಾಣಿಕ ಪ್ರಯತ್ನ ಶ್ಲಾಘನೀಯ ಎಂದರು. ಇದೇ ಸಂದರ್ಭ ಲಾಲಾಜಿ ಮೆಂಡನ್‌ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ನಿಟ್ಟೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮೆನೇಜ್‌ಮೆಂಟ್‌ನ ನಿರ್ದೇಶಕ ಡಾ. ಸುಧೀರ್ ಎಮ್, ಕಾಪು ತಹಶೀಲ್ದಾರ್‌ ಡಾ. ಪ್ರತಿಭಾ ಆರ್‌ ಮಾತನಾಡಿದರು.

ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿಯ ಉದ್ಯೋಗ ಮೇಳದಲ್ಲಿ 30 ಕಂಪೆನಿಗಳು ಭಾಗವಹಿಸಿದೆ. ಕಳೆದ 2 ಬಾರಿಯ ಉದ್ಯೋಗ ಮೇಳದಲ್ಲಿ 1,300 ಜನರು ಉದ್ಯೋಗ ಪಡೆದಿದ್ದು, ಈ ಬಾರಿ 1,700ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದು, ಹೆಚ್ಚಿನ ಜನರಿಗೆ ಉದ್ಯೋಗ ಸಿಗಲಿದೆ ಎಂದರು.

ಮಣಿಪಾಲ ವೈಷ್ಣವಿ ದುರ್ಗಾ ದೇವಳದ ಆಡಳಿತ ಮೊಕ್ತೇಸರ ಬಿ. ಜಯರಾಜ್ ಹೆಗ್ಡೆ, ನಿಟ್ಟೆ ಎನ್‌ಎಮ್‌ಎಎಮ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಭ್ಯುದಯ ಮುಖ್ಯಸ್ಥ ಭರತ್ ಜಿ. ಕುಮಾರ್, ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ರೋಶನ್ ಶೆಟ್ಟಿ, ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಬಿಜೆಪಿ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಮನೋಹರ್ ಶೆಟ್ಟಿ ತೋನ್ಸೆ, ಸುರತ್ಕಲ್‌ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಸುರತ್ಕಲ್, ಮುನಿಯಾಲು ಉದಯ ಕುಮಾರ್ ಶೆಟ್ಟಿ, ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಅಭಿಮತ ಆಡಳಿತ ಪಾಲುದಾರೆ ಡಾ. ಮಮತಾ ಪಿ. ಶೆಟ್ಟಿ, ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನ ಕಾರ್ಯಕ್ರಮ ನಿರ್ದೇಶಕಿ ಪ್ರೊ. ದಿವ್ಯಾ ರಾಣಿ ಪ್ರದೀಪ್, ಸಂದರ್ಶನ ಸಮಿತಿಯ ಛೇರ್ಮನ್ ಗುರುಪ್ರಶಾಂತ್ ಭಟ್ ಕೆ., ಉಡುಪಿ ಗ್ರಾಮೀಣ ಬಂಟರ ಸಂಘ ಅಧ್ಯಕ್ಷ ಡಾ. ಎಚ್. ಬಿ. ಶೆಟ್ಟಿ, ಟ್ರಸ್ಟಿಗಳಾದ ಜಗದೀಶ್ ಹೆಗ್ಡೆ ಪಳ್ಳಿ, ರಮೇಶ್ ಶೆಟ್ಟಿ ನಿಂಜೂರು, ದಯಾನಂದ ಶೆಟ್ಟಿ ಕಲ್ಮಂಜೆ, ಗೋಪಾಲ ಶೆಟ್ಟಿ ಬೆಳ್ಳೆ, ಹರೀಶ್ ಶೆಟ್ಟಿ ಬೆಳ್ಳೆ, ಟ್ರಸ್ಟಿ, ಕಾರ್ಯಕ್ರಮ ಸಂಚಾಲಕ ಪದ್ಮನಾಭ ಹೆಗ್ಡೆ, ವೇದಿಕೆಯಲ್ಲಿದ್ದರು. ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ, ಕಾರ್ಯಕ್ರಮ ಸಂಚಾಲಕ ವಿಜಿತ್ ಶೆಟ್ಟಿ ವಂದಿಸಿದರು. ಪ್ರೊ. ಡಾ. ಸುಧೀರ್‌ ರಾಜ್‌ ನಿರೂಪಿಸಿದರು.