ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ರಾಷ್ಟ್ರಮಟ್ಟದ ಹೊನಲು ಬೆಳಕಿನ ಪಂದ್ಯಕೂಟ - ಇಝಾನ್ ಸ್ಪೋರ್ಟ್ಸ್ ಉಡುಪಿ ತಂಡಕ್ಕೆ ಕಡಲ್ ಫಿಶ್ ಟ್ರೋಫಿ -2024

Posted On: 19-11-2024 09:33PM

ಪಡುಬಿದ್ರಿ : ಕಡಲ್ ಫಿಶ್ ಕ್ರಿಕೆಟರ್ಸ್ ವತಿಯಿಂದ ಪಡುಬಿದ್ರಿ ಬೋರ್ಡ್ ಶಾಲಾ ಮೃೆದಾನದಲ್ಲಿ 3 ದಿನ ಕಾಲ ನಡೆದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಪಂದ್ಯಕೂಟದಲ್ಲಿ ಇಝಾನ್ ಸ್ಪೋರ್ಟ್ಸ್ ಉಡುಪಿ ತಂಡವು ಪಂದ್ಯ ಗೆದ್ದು ರೂ. 5 ಲಕ್ಷದ ಜೊತೆಗೆ ಕಡಲ್ ಟ್ರೋಫಿ, ವಿಷ್ಣುಮೂರ್ತಿ ಕರ್ನಿರೆ ತಂಡ ರನ್ನಸ್೯ ಆಗಿ ರೂ. 3 ಲಕ್ಷದ ಜೊತೆಗೆ ಕಡಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಕೊನೆಯ ದಿನ ನಡೆದ ಸಮಿಫೃೆನಲ್ ಪಂದ್ಯದಲ್ಲಿ ವಿಷ್ಣುಮೂರ್ತಿ ಕರ್ನಿರೆ ತಂಡ ಹೆಜಮಾಡಿ ದುರ್ಗ ಎಜಿಫ್ ತಂಡವನ್ನು ಸೋಲಿಸಿ ಫೃೆನಲ್ ಪ್ರವೇಶಿಸಿತು. ಬಹಳ ರೋಮಾಂಚಕಾರಿಯಾಗಿ ನಡೆದ ದ್ವಿತೀಯ ಸಮಿಫೃೆನಲ್ ನಲ್ಲಿ ಇಝಾನ್ ಸ್ಪೋರ್ಟ್ಸ್ ಉಡುಪಿ ತಂಡ ಮತ್ತು ಪಂಚ್ಯಜನ್ಯಾ ಕೋಟ ತಂಡದ ವಿರುದ್ಧ ನಡೆದ ಪಂದ್ಯ ಟೃೆ ಗೊಂಡು ನಂತರ ನಡೆದ ಸೂಪರ್ ಓವರ್ ನಲ್ಲಿ ಪಂದ್ಯದಲ್ಲಿ ಪಂಚ್ಯಾಜನ್ಯ ತಂಡ ವನ್ನು ಮಣಿಸಿ ಇಝಾನ್ ಸ್ಪೋರ್ಟ್ಸ್ ಉಡುಪಿ ಫೈನಲ್ ಪ್ರವೇಶಿಸಿತು. ನಂತರ ನಡೆದ ಫೃೆನಲ್ ಹಣಾಹಣಿಯಲ್ಲಿ ಇಝಾನ್ ಸ್ಪೋರ್ಟ್ಸ್ ಉಡುಪಿ ತಂಡ ವಿಷ್ಣುಮೂರ್ತಿ ಕರ್ನಿರೆ ತಂಡವನ್ನು ಮಣಿಸಿತು.

ಫೃೆನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಇಝಾನ್ ಸ್ಪೋರ್ಟ್ಸ್ ಉಡುಪಿ ತಂಡದ ತರುಣ್ ಪಡುಬಿದ್ರಿ , ಉತ್ತಮ ದಾಂಡಿಗ ಪ್ರಶಸ್ತಿಯನ್ನು ದುರ್ಗ ‌ಎಜಿಎಫ್ ತಂಡದ ಇರ್ಫಾನ್ ಹೆಜಮಾಡಿ , ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಇಝಾನ್ ಸ್ಪೋರ್ಟ್ಸ್ ತಂಡದ ಇರ್ಪಾನ್ ಪಟೇಲ್ ಮಧ್ಯಪ್ರದೇಶ, ಉತ್ತಮ ಎಸೆತಗಾರ ಪ್ರಶಸ್ತಿಯನ್ನು ವಿಷ್ಣುಮೂರ್ತಿ ಕರ್ನಿರೆ ತಂಡದ ಸುದರ್ಶನ್, ಬೆಸ್ಟ್ ಫಿಲ್ಡರ್ ಪ್ರಶಸ್ತಿಯನ್ನು ವಿಷ್ಣುಮೂರ್ತಿ ಕರ್ನಿರೆ ತಂಡದ ಪ್ರಸಿದ್ಧ್ ಅಚಾರ್ಯ, ಬೆಸ್ಟ್ ಕೀಪರ್ ಪ್ರಶಸ್ತಿಯನ್ನು ವಿಷ್ಣುಮೂರ್ತಿ ಕರ್ನಿರೆ ತಂಡದ ಜೀತು , ಶಿಸ್ತುಬದ್ಧ ತಂಡ ಪ್ರಶಸ್ತಿಯನ್ನು ಫ್ರೆಂಡ್ಸ್ ಕಂಚಿನಡ್ಕ ತಂಡ ಪಡೆದು ಕೊಂಡರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಅತ್ಲೆಟಿಕ್ ಕೀಡಾಪಟು ಅನುರಾಗ್ ಜಿ. ರವರನ್ನು ಸನ್ಮಾನಿಸಲಾಯಿತು. ಕಡಲ್ ಫಿಶ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಚೇತನ್ ಪಡುಬಿದ್ರಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಉದ್ಯಮಿ ಪ್ರಸಾದ್ ಕಾಂಚನ್, ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಮೆಂಡನ್ , ಸಂಸ್ಥೆಯ ಗೌರವ ಅಧ್ಯಕ್ಷ ನವೀನಚಂದ್ರ ಜೆ ಶೆಟ್ಟಿ , ಮುಂಬೃೆ ಉದ್ಯಮಿ ಜಿತೇಂದ್ರ ಜೆ. ಶೆಟ್ಚಿ , ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ಸುಧೀರ್ ಕುಮಾರ್, ಉದ್ಯಮಿಗಳಾದ ಸಂತೋಷ್ ಕುಮಾರ್ ಶೆಟ್ಟಿ , ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೌರವ ಅಧ್ಯಕ್ಷ ಶರತ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಕಾಪು ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ರಮೀಜ್ ಹುಸೇನ್, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಕರ್ನಾಟಕ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ನಂದಿಕೂರು ಎಮ್ ಇಲೆವನ್ ಇಂಡಸ್ಟೀಸ್ ಸೂಪರ್ವೃೆಸರ್ ಅಹಮದ್ ಕಭೀರ್, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಕರುಣಾಕರ್ ಪೂಜಾರಿ, ಉದ್ಯಮಿಗಳಾದ ಬಾಲಚಂದ್ರ ಶೆಟ್ಟಿ ಪುಣೆ ಎರ್ಮಾಳ್ ಪುಚ್ಚೊಟ್ಟು , ಪ್ರಭಾಕರ್ ಶೆಟ್ಟಿ ಕರ್ನಿರೆ, ಸಂಪತ್ ಶೆಟ್ಟಿ ಕರ್ನಿರೆ, ರಕ್ಷಿತ್ ಶೆಟ್ಟಿ ‌ಕರ್ನಿರೆ, ಮತ್ಸೋದ್ಯಮಿ ತಿಲಕ್ ರಾಜ್ ಮಲ್ಪೆ, ಮಂಗಳೂರು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ಪ್ರೇಮ ವಾಸುದೇವ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಬಂಗೇರ, ಕಡಲ್ ಫಿಶ್ ಸಂಸ‌್ಥೆಯ ಅಧ್ಯಕ್ಷ ಪ್ರಶಾಂತ್ ಸಾಲ್ಯಾನ್, ಪಡುಬಿದ್ರಿ ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ, ಸದಸ್ಯರಾದ ಮುಬೀನಾ ಬೇಗಂ, ಸುನಂದಾ ದೇವಾಡಿಗ, ಮಹಮ್ಮದ್ ನಿಯಾಝ್ ಉಪಸ್ಥಿತರಿದ್ದರು. ಸಂತೋಷ್ ಪಡುಬಿದ್ರಿ ಸ್ವಾಗತಿಸಿ , ಸಂತೋಷ್ ನಂಬಿಯಾರ್ ನಿರೂಪಿಸಿ , ವಂದಿಸಿದರು.