ಕಾಪು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫಸ್೯ ಅಸೋಸಿಯೇಷನ್ (ರಿ.) ಮಂಗಳೂರು ವಲಯದ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ
"ದಸರಾ ವೈಭವ" ಛಾಯಾಚಿತ್ರ ಸ್ಪರ್ಧೆಯಲ್ಲಿ ಉಚ್ಚಿಲ ದಸರಾದ ಛಾಯಾಚಿತ್ರಕ್ಕೆ ಕಾಪು ವಲಯದ ಅಧ್ಯಕ್ಷರಾದ ಸಚಿನ್ ಉಚ್ಚಿಲ ಅವರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಮಂಗಳೂರಿನ ಸ್ಕೌಟ್ ಅಂಡ್ ಗೈಡ್ಸ್ ಸಭಾಭವನ ಲಾಲ್ ಬಾಗ್ ಮಂಗಳೂರು ಇಲ್ಲಿ ಜರಗಿದ ಸೌತ್ ಕೆನರಾ ಫೋಟೋಗ್ರಾಫಸ್೯ ಅಸೋಸಿಯೇಷನ್
ಮಂಗಳೂರು ವಲಯದ ವತಿಯಿಂದ ನಡೆದ "ಕಿಡ್ಸ್ ಫೋಟೋ ಫೆಸ್ಟ್" ಫೋಟೋಗ್ರಾಫಿ ಬಹುಮಾನ ವಿತರಣಾ ಸಮಾರಂಭದಲ್ಲಿ "ದಸರಾ ವೈಭವ" ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹರೀಶ್ ಅಡ್ಯಾರ್, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಎಸ್ಕೆಪಿಎ ಜಿಲ್ಲಾ ಅಧ್ಯಕ್ಷರಾದ ಪದ್ಮಪ್ರಸಾದ್ ಜೈನ್, ದಯಾನಂದ್ ಬಂಟ್ವಾಳ, ಕರುಣಾಕರ್ ಕಾನಂಗಿ, ರಮೇಶ್ ಕಲಾಶ್ರೀ, ಅಜಯ್ ಮಂಗಳೂರು, ಅರ್ಜುನ್ ಆರ್, ವಿಶಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.