ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ವತಿಯಿಂದ ಅಂಬಿಗ ನಾ ನಿನ್ನ ನಂಬಿದೆ ಎಂಬ ವಿನೂತನ ಅಭಿಯಾನದ ಅಂಗವಾಗಿ ಗುರುಪುರ ವೃದ್ಧ ದಂಪತಿಗಳ ಫಿನೈಲ್ ಮಾರಾಟ ಮಾಡಿ ಅವರಿಗೆ ಧನ ಸಹಾಯ ನೀಡುವ ಕಾರ್ಯಕ್ರಮ ಅಜ್ಜರಕಾಡು ಎಲ್ಐಸಿ ಕಚೇರಿಯ ಹತ್ತಿರ ನಡೆಯಿತು.
ಗುರುಪುರದ ವೃದ್ಧ ದಂಪತಿಗಳಾದ ಶಿವಾನಂದ ಮತ್ತು ಪಾರ್ವತಿ ಕಳೆದ 40 ವರ್ಷಗಳಿಂದ ಫಿನೈಲ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು ಅವರ ಕಷ್ಟಕ್ಕೆ ನೆರವಾಗುವ ಉದ್ದೇಶದಿಂದ ಈ ಅಭಿಯಾನ ನಡೆಯಿತು.
ಈ ಸಂದರ್ಭ ಒಂದು ಲಕ್ಷ ರೂ. ಸಂಗ್ರಹಿಸಿ ದಂಪತಿಗಳ ಜೀವನ ನಿವ೯ಹಣಿಗೆ ನೀಡಲಾಯಿತು.
ಹೋಂ ಡಾಕ್ಟರ್ ಫೌಂಡೇಶನ್ ಮುಖ್ಯಸ್ಥರಾದ ಡಾ. ಶಶಿಕಿರಣ್ ಶೆಟ್ಟಿ, ಡಾ. ಸುಮಾ ಶೆಟ್ಟಿ, ಸುಂದರ ಪೂಜಾರಿ, ಉದಯ ನಾಯ್ಕ್, ಸುಜಯ, ರಾಘವೇಂದ್ರ ಪ್ರಭು, ಕವಾ೯ಲು, ಜನಾದ೯ನ್ ಕೊಡವೂರು, ಸುಂದರ ಶೆಟ್ಟಿ, ಶಶಿಕಲಾ ಶೆಟ್ಟಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಪ್ರಥಮ ಎಂ.ಎಸ್.ಡಬ್ಲ್ಯೂ ವಿಭಾಗದ ವಿದ್ಯಾರ್ಥಿಗಳಾದ ಗಿರೀಶ್, ಪ್ರೇಮ್, ಸಾಯಿ, ಅಕ್ಷಯ, ಗೌತಮಿ, ದಾಕ್ಷಾಯಿಣಿ, ಅಂಕಿತಾ, ಅಕ್ಷಯ, ಬಿ.ಆರ್ ದನುಷ, ಪ್ರಿಯಾ ಉಪಸ್ಥಿತರಿದ್ದರು.