ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಾದಲ್ಲಿ ಅದಾನಿ ವಿದ್ಯುತ್ ಟವರ್ ನಿರ್ಮಾಣದ ವಿರುದ್ದ ಅಹೋರಾತ್ರಿ ಧರಣಿ

Posted On: 05-12-2024 10:03PM

ಕಾರ್ಕಳ : ತಾಲೂಕಿನ ಇನ್ನಾ ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ನಂದಿಕೂರು ಅದಾನಿ ಪವರ್ ಪ್ರಾಜೆಕ್ಟ್ ವಿದ್ಯುತ್ ಟವರ್ ನಿರ್ಮಾಣ ಕಾಮಗಾರಿಯ ಮುನ್ಸೂಚನೆ ದೊರೆಯುತ್ತಿದ್ದಂತೆ ಬೃಹತ್ ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರು ಟವರ್ ನಿರ್ಮಾಣ ವಿರೋದಿ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಗ್ರಾಮಸ್ಥರ ವಿರೋಧದ ನಡುವೆ ಕಾಮಗಾರಿ ಆರಂಭಿಸುವುದು ಖಂಡನೀಯ, ಯಾವ ಕಾರಣಕ್ಕೂ ಕಾಮಗಾರಿ ಆರಂಭಿಸಲು ಅವಕಾಶ ನೀಡುವುದಿಲ್ಲ ಎಂದು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್, ಸಮಿತಿಯ ಅಧ್ಯಕ್ಷರಾದ ಅಮರನಾಥ ಶೆಟ್ಟಿ ಇನ್ನಾ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ತಕ್ಷರಾದ ದೀಪಕ್ ಕೋಟ್ಯಾನ್ ಇನ್ನಾ, ಚಂದ್ರಹಾಸ ಶೆಟ್ಟಿ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕುಶ.ಆರ್. ಮೂಲ್ಯ, ಜಯ.ಎಸ್.ಕೋಟ್ಯಾನ್, ರಾಜಾ ಭಟ್, ಗಣಪತಿ ಹೆಗ್ಡೆ, ದೀಪಕ್ ಕಾಮತ್, ಆರ್.ಕೆ. ದಿವಾಕರ ಶೆಟ್ಟಿ, ಎಮ್.ಪಿ. ಮೊಯಿದಿನಬ್ಬ, ಹರೀಶ್ ಶೆಟ್ಟಿ, ಶುಭದ್ ರಾವ್, ಕೃಷ್ಣ ಕುಮಾರ್ ಶೆಟ್ಟಿ, ಯೋಗೀಶ್ ಇನ್ನಾ, ಅನಿತಾ ಡಿಸೋಜ, ಪ್ರದೀಪ್ ಬೇಲಾಡಿ, ಚಂದ್ರಹಾಸ ಶೆಟ್ಟಿಗಾರ್, ರಂಜಿತ್ ಸಿ.ಟಿ, ಸೂರಜ್ ಶೆಟ್ಟಿ, ಸುಹಾಸ್ ಕಾವ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.