ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮುಂಡಾಲ ಯುವವೇದಿಕೆ ಪಡುಬಿದ್ರಿ : ಪಿರಾಕ್ದ ಗೊಬ್ಬುಲ್ನ ಬುಲೆಚ್ಚಿಲ್ - ಗ್ರಾಮೀಣ ಕ್ರೀಡಾಕೂಟ ಉದ್ಘಾಟನೆ

Posted On: 08-12-2024 01:14PM

ಪಡುಬಿದ್ರಿ : ಮುಂಡಾಲ ಯುವವೇದಿಕೆ (ರಿ.) ಪಡುಬಿದ್ರಿ ನೇತೃತ್ವದಲ್ಲಿ ಉಡುಪಿ, ಮಂಗಳೂರುವರೆಗಿನ ಮುಂಡಾಲ ಸಮಾಜ ಬಾಂಧವರಿಗಾಗಿ ನಡೆದ "ಪಿರಾಕ್ದ ಗೊಬ್ಬುಲ್ನ ಬುಲೆಚ್ಚಿಲ್" ಗ್ರಾಮೀಣ ಕ್ರೀಡಾಕೂಟ ಭಾನುವಾರ ಪಡುಬಿದ್ರಿ ಬೋರ್ಡುಶಾಲಾ ಮೈದಾನದಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ಪಲಿಮಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿತೇಂದ್ರ ಫುಟಾರ್ಡೊ ಉದ್ಘಾಟಿಸಿ ಶುಭ ಹಾರೈಸಿದರು.

ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ಯುವಕ ವೃಂದದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ, ಇಂದಿನ ಮಕ್ಕಳು ಬಹುಪಾಲು ಸಮವನ್ನು ಮೊಬೈಲ್ ನಲ್ಲಿ ವ್ಯಯಿಸುವ ಇಂದಿನ ಕಾಲಘಟ್ಟದಲ್ಲಿ ತುಳುನಾಡಿನ ಹಿಂದಿನ ಕಾಲದ ಕ್ರೀಡೆಗಳನ್ನು ಮಕ್ಕಳಿಗೆ ಪರಿಚಯಿಸಬೇಕಾಗಿದೆ. ಹಳ್ಳಿಯ ಆಟಗಳು ದೈಹಿಕ, ಮಾನಸಿಕ ಆರೋಗ್ಯಕ್ಕೆ ಉತ್ತಮ. ಈ ನಿಟ್ಟಿನಲ್ಲಿ ಪಡುಬಿದ್ರಿ ಮುಂಡಾಲ ಯುವವೇದಿಕೆಯ ಕಾರ್ಯ ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ರಮೇಶ್ ಯು., ಕಿರಣ್ ಕುಮಾರ್ ಕೊಡಿಯಾಲ್ ಬೈಲ್, ಕೃಷ್ಣ ಶೆಟ್ಟಿ ಪೊಸ್ರಾಲ್, ಕೆ. ಸತ್ಯಶಂಕರ ಶೆಟ್ಟಿ, ರಘುರಾಜ್ ಕದ್ರಿ, ವಿನಯ್, ಪ್ರಕಾಶ್ ಕೋಡಿಕಲ್, ಜಾನಪದ ವಿದ್ವಾಂಸ ಕೆ.ಕೆ. ಪೇಜಾವರ ಮತ್ತಿತರರು ಉಪಸ್ಥಿತರಿದ್ದರು. ಸುರೇಶ್ ಪಡುಬಿದ್ರಿ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು.