ಕಾಪು : ತಾಲೂಕಿನ ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಜ.30 ರಿಂದ ಫೆ. 9ರವರೆಗೆ ನಡೆಯಲಿದ್ದು ಆ ಪ್ರಯುಕ್ತ ಇದರ ಆಮಂತ್ರಣ ಪತ್ರಿಕೆಯನ್ನು ರವಿವಾರ ಕ್ಷೇತ್ರದ ಆವರಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ದೈವ ದೇವಸ್ಥಾನಗಳು ಪೂರ್ವಜರು ಬಿಟ್ಟು ಹೋದ ಆಸ್ತಿ. ದೇವಸ್ಥಾನ ಕಟ್ಟಿದರೆ ಸಾಲದು ಅದರ ನಿರ್ವಹಣೆಯೂ ಅತಿ ಮುಖ್ಯ. ಎಲ್ಲರೂ ಜೀಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕೃತಾರ್ಥರಾಗೋಣ ಎಂದರು.
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಮಾತನಾಡಿ, ಮನ:ಶಾಂತಿಗಾಗಿ ದೇವರ ಪ್ರಾರ್ಥನೆ ಮುಖ್ಯ. ಕಾಪು ಭಾಗದ ಎಲ್ಲಾ ದೇವಳಗಳು ಜೀಣೋದ್ಧಾರವಾಗುವ ಮೂಲಕ ಬೆಳಗುತ್ತಿದೆ. ಊರ ಪರವೂರ ಸಹಕಾರದಿಂದ ದೇವಸ್ಥಾನದ ಬೆಳವಣಿಗೆ ಸಾಧ್ಯ ಎಂದರು.
ಕಾಪು ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ವಿಜಯ ಶೆಟ್ಟಿ ಕಾರ್ಕಳ ಮಾತನಾಡಿದರು.
ಗ್ರಾ.ಪಂ. ಅಧ್ಯಕ್ಷ ವಳದೂರು ಪ್ರಸಾದ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಕಿಶನ್ ಭಂಡಾರಿ, ಮುಂಬಯಿ ಸಮಿತಿಯ ಸಲಹೆಗಾರ ಯಾದವ ಕೃಷ್ಣ ಶೆಟ್ಟಿ , ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರ ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು, ಮಕರ ಕಂಸ್ಟ್ರಕ್ಷನ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಸುಧಾಕರ ಶೆಟ್ಟಿ ಮಲ್ಲಾರು, ಅರ್ಚಕ ಸುಬ್ರಹ್ಮಣ್ಯ ಮಂಜಿತ್ತಾಯ, ಉಪಾಧ್ಯಕ್ಷ ವಿಠಲ ಶೆಟ್ಟಿ ಪಡುಬರ್ಪಾಣಿಗುತ್ತು, ಬರ್ಪಾಣಿ ಮೋಹನ್ ಶೆಟ್ಟಿ, ಉಪಾಧ್ಯಕ್ಷರಾದ ಪಡುಮನೆ ದಿನೇಶ್ ಶೆಟ್ಟಿ, ಉಪಾಧ್ಯಕ್ಷರಾದ ಪ್ರೇಮಾನಾಥ ಶೆಟ್ಟಿ, ನಿರಂಜನ ಶೆಟ್ಟಿ, ಭಜನಾ ಮಂಡಳಿ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ನಾಗಭೂಷಣ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಕೋಶಾಧಿಕಾರಿ ಕೆ ಪದ್ಮನಾಭ ಶಾನುಭಾಗ್ ಸ್ವಾಗತಿಸಿದರು. ನಿರ್ಮಲ್ ಕುಮಾರ್ ಹೆಗಡೆ ನಿರೂಪಿಸಿದರು. ವಾಸುದೇವ ರಾವ್ ವಂದಿಸಿದರು.