ಶಿರ್ವ : ರೋಟರಿ ಸಮುದಾಯದಳ ಜಿಲ್ಲಾ ಸಮ್ಮೇಳನ 2024-25 ಸಂಪನ್ನ
Posted On:
01-01-2025 09:19AM
ಶಿರ್ವ : ಅಂತಾರಾಷ್ಟ್ರೀಯ ರೋಟರಿ ಮಾರ್ಗದರ್ಶನದಲ್ಲಿ ಗ್ರಾಮೀಣ ಸಮುದಾಯ ದಳಗಳು ಗ್ರಾಮೀಣ ಭಾಗದ ಸೇವಾಸಕ್ತರ ಒಂದು ಒಕ್ಕೂಟವಾಗಿದ್ದು, ರೋಟರಿ ಸಮುದಾಯ ಸೇವೆಯ ಒಂದು ಭಾಗವಾಗಿದೆ. ರೋಟರಿಯ ಮಾರ್ಗದರ್ಶನದಲ್ಲಿ ಸಮರ್ಥ ನಾಯಕತ್ವ, ಸ್ವಾವಲಂಬಿ ಜೀವನಕ್ಕೆ ಪೂರಕ ವಾತಾವರಣದ ನಿರ್ಮಾಣದ ಜೊತೆಗೆ ಗ್ರಾಮೀಣ ಪರಿಸರದ ಸುಧಾರಣೆ, ಅಭಿವೃದ್ಧಿಗೆ ಸಮುದಾಯದಳಗಳ ಪುನಶ್ಚೇತನ ಅಗತ್ಯವಾಗಿದೆ ಎಂದು ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ಸಿಎ. ದೇವ್ ಆನಂದ್ ನುಡಿದರು.
ಅವರು ಶಿರ್ವ ರೋಟರಿಯ ಸಂಸ್ಥಾಪಕರು, ಬಹುಮುಖಿ ಪ್ರತಿಭಾ ಸಂಪನ್ನರಾದ ದಿ.ಪಾಂಗಾಳ ವಿಟ್ಠಲ ಶೆಣೈ ಜನ್ಮ ಶತಮಾನೋತ್ಸವದ ಸವಿನೆನಪಿನಲ್ಲಿ ಶಿರ್ವ ರೋಟರಿ ಕ್ಲಬ್, ಪಾದೂರು ರೋಟರಿ ಸಮುದಾಯದಳದ ನೇತೃತ್ವ ಹಾಗೂ ರೋಟರಿ ಶಂಕರಪುರ ಇದರ ಸಹಕಾರದಲ್ಲಿ
ಶಂಕರಪುರ ಸೈಂಟ್ ಜೋನ್ಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಹಾಸನ ಜಿಲ್ಲೆಗಳನ್ನು ಒಳಗೊಂಡ ರೋಟರಿ ಅ.ರಾ.ಜಿಲ್ಲೆ 3182 ಇದರ ರೋಟರಿ ಸಮುದಾಯದಳ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಆರಂಭದಲ್ಲಿ ದಿ.ಪಾಂಗಾಳ ವಿಟ್ಠಲ್ ಶೆಣೈಯವರ ಸಂಸ್ಮರಣಾರ್ಥ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ದಿಕ್ಸೂಚಿ ಭಾಷಣ ಮಾಡಿದ ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ.ದೇವದಾಸ್ ರೈ ಮಂಗಳೂರು ಇವರು ಮಾತನಾಡಿ ರೋಟರಿ ಸಮುದಾಯದಳದ ಸಂಘಟನೆ,ಕಾರ್ಯವ್ಯಾಪ್ತಿ, ಮತ್ತು ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಣ, ಕೃಷಿ, ಸಾಹಿತ್ಯ, ರಂಗಭೂಮಿ ಸಂಘಟನೆ, ಸಮಾಜಸೇವೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗಾಗಿ ನೀಡಲಾಗುತ್ತಿರುವ ಪಾಂಗಾಳ ವಿಟ್ಠಲ ಶೆಣೈ ಸ್ಮರಣಾರ್ಥ "ಸಾಧನಾ-ಪ್ರೇರಣಾ ಪುರಸ್ಕಾರ"ವನ್ನು ನಿವೃತ್ತ ಶಿಕ್ಷಕ,ಕಲಾವಿದ ಕೃಷ್ಣಕುಮಾರ್ ರಾವ್ ಮಟ್ಟುರವರಿಗೆ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಆರ್‌ಸಿಸಿ ಜಿಲ್ಲಾ ಛೆರ‍್ಮನ್ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಂಗಾಳ ಜಯರಾಮ ಶೆಣೈ, 2025-26ನೇ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ಪಾಲಾಕ್ಷ ಹಾಸನ, 2026-27ರ ಜಿಲ್ಲಾ ಗವರ್ನರ್ ಬಿ.ಎಂ.ಭಟ್ ಬ್ರಹ್ಮಾವರ, ವಲಯ ಸಹಾಯಕ ಗವರ್ನರ್ ಅನಿಲ್ ಡೇಸಾ, ಆರ್‌ಸಿಸಿ ಜಿಲ್ಲಾ ಪ್ರತಿನಿಧಿ ಪ್ರಸಾದ್ ಆಚಾರ್ಯ ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಐರೋಡಿ ರಾಮದೇವ ಕಾರಂತ, ಶಂಕರಪುರ ರೋಟರಿ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಕಾಪು ರೋಟರಿ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ, ಪಾದೂರು ಆರ್‌ಸಿಸಿ ಅಧ್ಯಕ್ಷ ಪ್ರಕಾಶ್ ಆಚಾರ್ಯ, ವಲಯ ಸೇನಾನಿ ಮೆಲ್ವಿನ್ ಡಿಸೋಜ ಶಿರ್ವ, ಆರ್‌ಸಿಸಿ ವಲಯ ಸಂಯೋಜಕರಾದ ಶರತ್ ಹೆಗ್ಡೆ ಶಂಕರನರಾಯಣ, ಸ್ಮಿತಾ ಕಾಮತ್ ಐಸಿರಿ ಪರ್ಕಳ, ವಲಯ 2ರ ಸಹಾಯಕ ಗವರ್ನರ್ ಮಮತಾ ಶೆಟ್ಟಿ, ಪಾದೂರು ಆರ್‌ಸಿಸಿ ಸಭಾಪತಿ ಜಯಕೃಷ್ಣ ಆಳ್ವ,ವಲಯ ಸಂಯೋಜಕ ರಘುಪತಿ ಐತಾಳ್, ಕಾರ್ಯದರ್ಶಿ ಕಿಶೋರ್ ಆಚಾರ್ಯ ವೇದಿಕೆಯಲ್ಲಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ ವಹಿಸಿದ್ದರು. ಸಮ್ಮೇಳನ ಸಮಿತಿಯ ಅಧ್ಯಕ್ಷ ಡಾ.ವಿಟ್ಠಲ್ ನಾಯಕ್ ಸ್ವಾಗತಿಸಿದರು. ಪಾದೂರು ರಮಾಕಾಂತ್ ಐತಾಳ್ ಪ್ರಾರ್ಥಿಸಿದರು. ಡಾ.ಅರುಣ್ ಕುಮಾರ್ ಹೆಗ್ಡೆ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಈವನ್ ಜ್ಯೂಡ್ ಡಿಸೋಜ ವಂದಿಸಿದರು. ಆರಂಭದಲ್ಲಿ ಹಿರಿಯ ಸಾಹಿತಿ ಪಾಂಗಾಳ ಬಾಬು ಕೊರಗ ನೇತೃತ್ವದ ನವೋದಯ ಕೊರಗರ ಸಾಂಸ್ಕೃತಿಕ ಕಲಾ ತಂಡದಿಂದ ಕಲಾ ಪ್ರಸ್ತುತಿ ನಡೆಯಿತು.
ನಂತರ ನಡೆದ ಮೂರು ಪ್ರಧಾನಗೋಷ್ಠಿಗಳಲ್ಲಿ "ಸೇವಾಹೀ ಪರಮೋ ಧರ್ಮ:" ಸಂಪನ್ಮೂಲವ್ಯಕ್ತಿಗಳಾಗಿ ಶಿಕ್ಷಕರು ಹಾಗೂ ಕಸಾಪ ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, "ಯುವಜನತೆ ಮತ್ತು ಕೃಷಿ ಜೀವನ ಶೈಲಿ" ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, "ಮಿರಾಕಲ್ ಫಾರೆಸ್ಟ್ ಚಾಲೆಂಜ್" ಸಮಾಜಸೇವಕರಾದ ಮಹೇಶ್ ಶೆಣೈ ಕಟಪಾಡಿ ಮಾತನಾಡಿದರು. ಡಾ.ವಿಟ್ಟಲ್ ನಾಯಕ್ ನಿರೂಪಿಸಿದರು. ನಂತರ ಸಾಂಸ್ಕೃತಿಕ ಪ್ರತಿಭಾ ಸ್ಫರ್ಧಾ ಕಾರ್ಯಕ್ರಮ ಜರುಗಿತು.
ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ದೇವ್‌ಆನಂದ್‌ರವರು ಸ್ಫರ್ಧಾ ವಿಜೇತರಿಗೆ ನಗದು ಬಹುಮಾನ ಸಹಿತ ಟ್ರೋಫಿ, ಅರ್ಹತಾ ಪತ್ರ ವಿತರಿಸಿ ಅಭಿನಂದಿಸಿದರು. ಆರ್‌ಸಿಸಿ ಮೂಡುಗಿಳಿಯಾರು ಪ್ರಥಮ, ಕೊರವಾಡಿ ಕೋಟೇಶ್ವರ ದ್ವಿತೀಯ, ಹೊರನಾಡು ಕಳಸ ತೃತೀಯ , ಮಣಿಪಾಲ ಹಿಲ್ಸ್ ಚತುರ್ಥ, ಹರಿಹರಪುರ ಪಂಚಮ ಸ್ಥಾನಗಳಿಸಿದರು. ಸ್ಫರ್ಧಾ ಸಂಯೋಜಕ ರಘುಪತಿ ಐತಾಳ್ ವಿಜೇತರ ಪಟ್ಟಿ ವಾಚಿಸಿದರು. ದಿನೇಶ್ ಕುಲಾಲ್ ಸಹಕರಿಸಿದರು. ನಿಣಾಯಕರಾಗಿ ಕೃಷ್ಣಕುಮಾರ್ ರಾವ್, ಪ್ರಕಾಶ್ ಸುವರ್ಣ ಕಟಪಾಡಿ, ರಾಘವೇಂದ್ರ ರಾವ್ ಸಹಕರಿಸಿದರು.
ಈ ಸಂದರ್ಭದಲ್ಲಿ ಆರ್‌ಸಿಸಿ ಜಿಲ್ಲಾ ಎಸ್ಸೆಂಬಿಯನ್ನು ಯಶಸ್ವಿಯಾಗಿ ಸಂಘಟಿಸಿದ ಸ್ಮಿತಾ ಗುರುದತ್ತ್ ಕಾಮತ್ ಪರ್ಕಳ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಆರ್‌ಸಿಸಿ ವೈಸ್ ಛೆರ‍್ಮನ್ ಜೆ.ಎಂ.ಶ್ರೀಹರ್ಷ, ಜಿಲ್ಲಾ ಕಾರ್ಯದರ್ಶಿ ಜೈಕಿಸನ್ ಶೆಟ್ಟಿ, ವಲಯ ಸಹಾಯಕ ಗವರ್ನರ್‌ಗಳಾದ ಅನಿಲ್ ಡೇಸಾ, ರಾಘವೇಂದ್ರ ಸಾಮಗ, ಮಮತಾ ಶೆಟ್ಟಿ,ಆರ್‌ಸಿಸಿ ವಲಯ ಸಂಯೋಜಕರು, ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹಿರಣ್ಣಯ್ಯ ಹಿರೇಮಠ್, ಸುಪ್ರೀತಾ ಪುರಾಣಿಕ್ ಮೂಡುಗಿಳಿಯಾರು ಮಾತನಾಡಿದರು. ಡಾ.ಅರುಣ್ ಹೆಗ್ಡೆ ನಿರೂಪಿಸಿದರು. ವಿಷ್ಣುಮೂರ್ತಿ ಸರಳಾಯ ವಂದಿಸಿದರು.