ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿಯ ವಿಶ್ವ ಕಲ್ಲಟ್ಟೆಯವರಿಂದ ಮೋದಿಯ ಶ್ರೇಯೋಭಿವೃದ್ಧಿಗಾಗಿ ಶಬರಿಮಲೆಗೆ ಪಾದಯಾತ್ರೆ

Posted On: 12-01-2025 12:12PM

ಪಡುಬಿದ್ರಿ : ಪಡುಬಿದ್ರಿಯ ಕಲ್ಲಟ್ಟೆಯ ವಿಶ್ವ ಎಂಬುವವರು ಅಯ್ಯಪ್ಪ ಸ್ವಾಮಿ ಭಕ್ತರಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯಾಗಿ ಅವರು 3ನೇ ಬಾರಿ ಪ್ರಧಾನಿಯಾಗಬೇಕೆಂದು ಮತ್ತು ಅವರ ಶ್ರೇಯೋಭಿವೃದ್ಧಿಗಾಗಿ ಸಂಕಲ್ಪ ಮಾಡಿದ್ದರು. ಅದರಂತೆ ಪಡುಬಿದ್ರಿಯಿಂದ ಪಾದಯಾತ್ರೆಯ ಮೂಲಕವೇ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ.

ಪಡುಬಿದ್ರಿಯ ಭಗವತಿ ಗ್ರೂಪಿನ ಸದಸ್ಯರಾಗಿರುವ ವಿಶ್ವ ಕಲ್ಲಟ್ಟೆ ಅವರು ಚುನಾವಣೆಗೆ ಮುಂಚೆಯೇ ಈ ಹರಕೆಯ ಸಂಕಲ್ಪವನ್ನು ಮಾಡಿದ್ದರು. ಇದೀಗ 18ನೇ ವರ್ಷದ ಶಬರಿಮಲೆ ಯಾತ್ರೆ ಮಾಡುತ್ತಿರುವ ವಿಶ್ವ ಕಲ್ಲಟ್ಟೆ ಇವರು ಸತತ 8 ವರ್ಷಗಳಿಂದ ಪಡುಬಿದ್ರಿಯಿಂದ ಪಾದಯಾತ್ರೆಯ ಮೂಲಕವೇ ಶಬರಿಮಲೆ ಯಾತ್ರೆ ಮಾಡುತ್ತಿದ್ದು, ಇದೀಗ 9ನೇ ವರ್ಷದ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.