ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸಂಕ್ರಾಂತಿ ಜಾನಪದ ಸಂಭ್ರಮ ಮಹಿಳೆಯರಿಗಾಗಿ ಉಡುಪಿ ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆ

Posted On: 14-01-2025 07:21PM

ಉಡುಪಿ : ಕನ್ನಡ ಜಾನಪದ ಪರಿಷತ್ ಬೆಂಗಳೂರು, ಉಡುಪಿ ಜಿಲ್ಲಾ ಘಟಕ, ಕ.ಜಾ.ಪ. ಕುಂದಾಪುರ ತಾಲೂಕು ಹಾಗೂ ರೋಟರಿ ಸಮುದಾಯ ದಳ ಕೊರವಡಿ ಇದರ ಸಂಯುಕ್ತ ಆಶ್ರಯದಲ್ಲಿ ಸಂಕ್ರಾಂತಿ ಜಾನಪದ ಸಂಭ್ರಮ ಮಹಿಳೆಯರಿಗಾಗಿ ಉಡುಪಿ ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆ ಮಂಗಳವಾರ ಶ್ರೀ ವಿಷ್ಣುಮೂತಿ೯ ದೇವಸ್ಥಾನದ ಸಂಭಾಗಣ ಕೊರವಾಡಿಯಲ್ಲಿ ನಡೆಯಿತು. ಕಾಯ೯ಕ್ರಮದ ಉದ್ಘಾಟನೆಯನ್ನು ಗ್ರಾ.ಪಂ ಅಧ್ಯಕ್ಷ ಆನಂದ ಪೂಜಾರಿ ನೆರವೇರಿಸಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿ ಮಾತನಾಡಿ, ಜಾನಪದವು ನಮ್ಮ ದೇಶದ ಅಪೂವ೯ ಸಂಪತ್ತಾಗಿದೆ ಇದನ್ನು ಉಳಿಸಿ ಬೆಳೆಸಬೇಕು. ಸಂಕ್ರಾಂತಿಯನ್ನು ರಂಗೋಲಿ ಹಾಕುವ ಮೂಲಕ ಮನೆಗೆ ಸ್ವಾಗತಿಸುತ್ತಾರೆ. ಇದಕ್ಕೆ ಧಾಮಿ೯ಕ ಹಿನ್ನಲೆಯೊಂದಿಗೆ ಸಾಂಸ್ಕೃತಿಕ ಪರಂಪರೆಯಿದೆ ಎಂದರು.

ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಕೋಟೇಶ್ವರ ಅಧ್ಯಕ್ಷತೆ ವಹಿಸಿದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿ ಮಾತನಾಡಿ, ಜಾನಪದವು ನಮ್ಮ ದೇಶದ ಅಪೂವ೯ ಸಂಪತ್ತಾಗಿದೆ ಇದನ್ನು ಉಳಿಸಿ ಬೆಳೆಸಬೇಕು. ಸಂಕ್ರಾಂತಿಯನ್ನು ರಂಗೋಲಿ ಹಾಕುವ ಮೂಲಕ ಮನೆಗೆ ಸ್ವಾಗತಿಸುತ್ತಾರೆ. ಇದಕ್ಕೆ ಧಾಮಿ೯ಕ ಹಿನ್ನಲೆಯೊಂದಿಗೆ ಸಾಂಸ್ಕೃತಿಕ ಪರಂಪರೆಯಿದೆ ಎಂದರು.ಅಧ್ಯಕ್ಷರಾದ ಸತೀಶ್ ಎಂ.ನಾಯ್ಕ್, ಸಮುದಾಯ ದಳ ಕೊರವಡಿ ಅಧ್ಯಕ್ಷ ಕೆ ಸುರೇಶ್ ವಿಠಲವಾಡಿ, ಸ್ಥಾಪಕ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ , ಉಡುಪಿ ತಾಲೂಕು ಅಧ್ಯಕ್ಷೆ ಮಾಯಾ ಕಾಮತ್, ಜಿಲ್ಲಾ ಪದಾಧಿಕಾರಿಗಳಾದ ರಾಘವೇಂದ್ರ ಪ್ರಭು ಕವಾ೯ಲು, ನರಸಿಂಹ ನಾಯಕ್, ತೀಪು೯ಗಾರರಾದ ಸಿಂಧು ಐತಾಳ, ರವಿಕಟ್ಕರೆ ಮುಂತಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಕುಂದಾಪುರ ತಾಲೂಕು ಅಧ್ಯಕ್ಷೆ ಸುಪ್ರಿತಾ ಪುರಾಣಿಕ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಸಂಧ್ಯಾ ಹೆಗಡೆ ನಿರೂಪಿಸಿದರು. ವಿಜೇತರಿಗೆ ನಗದು ಬಹುಮಾನ ದೊಂದಿಗೆ ಗೌರವಿಸಲಾಯಿತು.