ಉಡುಪಿ : ಹೊಸ ಬದುಕು ಆಶ್ರಮವಾಸಿಗಳಿಗೆ ಅನ್ನದಾನ, ದಿನಸಿ ಸಾಮಗ್ರಿ, ಪರಿಕರಗಳ ಕೊಡುಗೆ
Posted On:
01-02-2025 04:03PM
ಉಡುಪಿ : ಉಡುಪಿಯ ಕಾರ್ತಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಹೊಸ ಬದುಕು ವೃದ್ಧಾಶ್ರಮದ ವಾಸಿಗಳಿಗೆ ಒಂದು ದಿನದ ಅನ್ನದಾನದ ಸೇವೆಯನ್ನು ಬೆಂಗಳೂರಿನ ಪದ್ಮ ರಾಮದಾಸ್ ರಾವ್ ದಂಪತಿಗಳ ಮದುವೆ ವಾರ್ಷಿಕೋತ್ಸವದ ಅಂಗವಾಗಿ ನೀಡಲಾಯಿತು.
ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಮೂರನೇ ಪಾತ್ರಿ ಸುಬ್ರಹ್ಮಣ್ಯ ರಾವ್ ರವರು ಮಾತನಾಡಿ, ದಾನ ಮಾಡುವವರಲ್ಲಿ ಜಾತಿ-ಕುಜಾತಿ ಎಂಬ ಬೇಧ ಭಾವವಿಲ್ಲ. ಅದರಲ್ಲೂ ಸಕಲ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಲೇಸು ಎಂಬಂತೆ ಸಕಲ ದಾನಗಳಲ್ಲಿ ಅನ್ನದಾನ ಶ್ರೇಷ್ಠವಾದದು. ಸ್ವಚ್ಛಂದ ಮನಸ್ಸಿನಿಂದ ಮಾಡುವ ದಾನದಲ್ಲಿ ದೇವರನ್ನು ಕಾಣಬಹುದು. ಯಾವುದೇ ದಾನ ನಮ್ಮ ಕೃೆಯಿಂದ ಮಾಡುವವನು ಪರಮೇಶ್ವರನೇ ಆಗಿರುತ್ತಾನೆ. ಯಾವುದೇ ಬೇಧ ಭಿನ್ನತೆ ಇಲ್ಲದೆ ಸಕಲ ಜಗತ್ತನ್ನು ಸಂರಕ್ಷಿಸುತ್ತಾನೆ ಎಂದರು.
ಫಲವಸ್ತು ಹಾಗು ಶಾಲುಗಳನ್ನು ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಪ್ರಥಮ ಗುರಿಕಾರ ಗಿರೀಶ್ ರಾವ್, 60 ಕೆ.ಜಿ. ಅಕ್ಕಿಯನ್ನು ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಮೂರನೇ ಪಾತ್ರಿ ಸುಬ್ರಹ್ಮಣ್ಯ ರಾವ್ ಮತ್ತು ಮಹೇಂದ್ರರವರು, ಇಸೀ ಚಯರ್ ಗಳನ್ನು ಕಾಪು ಕಲ್ಯದ ದಿವಂಗತ ಕಮಲ ಶೇರಿಗಾರ್ತಿರವರ ನೆನಪಿಗಾಗಿ ಮಕ್ಕಳು ಹಾಗು ದಿನಸಿ ಸಾಮಾಗ್ರಿಗಳನ್ನು ಪಡುಬಿದ್ರಿ ಸುಶೀಲ್ ಕಾಂಚನ್ ರವರು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಪಡುಬಿದ್ರಿ ಬಾಲಪ್ಪ ಗರಿಕಾರರಾದ ನಟರಾಜ್ ರಾವ್, ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಪ್ರಥಮ ಗುರಿಕಾರ ಗಿರೀಶ್ ರಾವ್, ಆಶ್ರಮದ ನಿತ್ಯ ದಾನಿಯಾದ ಸುಶೀಲಾ ರಾವ್ ಉಡುಪಿ, ಪಡುಬಿದ್ರಿ ರೋಟರಿ ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಪೂರ್ವ ಕಾರ್ಯದರ್ಶಿ ಪವನ್ ಸಾಲ್ಯಾನ್, ಶುಭಸಂತೋಷ್, ಹೊಸ ಬದುಕು ಸಂಸ್ಥೆಯ ನಿರ್ವಾಹಕರಾದ
ವಿನಯಚಂದ್ರ, ರಾಜಶ್ರೀ ಉಪಸ್ಥಿತರಿದ್ದರು.