ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಊರಿನ ರಸ್ತೆಗೆ ಕಾಯಕಲ್ಪ ನೀಡಿದ 80 ವಯಸ್ಸಿನ ಶ್ರೀನಿವಾಸ ಮೂಲ್ಯರಿಗೆ ಕುಲಾಲ ಸಂಘದಿಂದ ಸನ್ಮಾನ

Posted On: 13-02-2025 07:32PM

ಕಾರ್ಕಳ : ತಾಲೂಕಿನ ಮರ್ಣೆ ಪಂಚಾಯತ್ ನ ಒಂದು ಭಾಗದ ರಸ್ತೆಯನ್ನು 50 ವರ್ಷದಿಂದ ಶ್ರೀನಿವಾಸ್ ಮೂಲ್ಯ ಎನ್ನುವ 80 ವರ್ಷದ ವೃದ್ಧ ರಿಪೇರಿ ಮಾಡುತ್ತಿರುವುದು ಗಮನಾರ್ಹವಾಗಿದೆ.

ಈ ಸಾಹಸದ ಕಾರ್ಯವನ್ನು ಗುರುತಿಸಿ ಇತ್ತೀಚೆಗೆ ಅಜೆಕಾರು ಕುಲಾಲ ಸಂಘದ ಪ್ರಮುಖರಾದ ಕೃಷ್ಣ ಮೂಲ್ಯ ಅಜೆಕಾರು, ಸುರೇಂದ್ರ ಮೂಲ್ಯ, ಅನಿಲ್ ಎಣ್ಣೆಹೊಳೆ, ಸುಕೇಶ್ ಮೂಲ್ಯ, ಯೋಗೀಶ್ ಮೂಲ್ಯ, ಜಯಾನಂದ ಮೂಲ್ಯ, ಹರೀಶ್ ಮೂಲ್ಯ ಉಪಸ್ಥಿಯಲ್ಲಿ ಸನ್ಮಾನಿಸಲಾಯಿತು.