ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬಹ್ಮಕಲಶೋತ್ಸವದ ಅಂಗವಾಗಿ ಫೆಬ್ರವರಿ 22 ಮತ್ತು 23ರಂದು ಬೃಹತ್ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ನಡೆಯಲಿದೆ ಎಂದು ಹೊರೆ ಕಾಣಿಕೆ ಸಮರ್ಪಣಾ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.
ಅವರು ಶುಕ್ರವಾರ ಕಾಪುವಿನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಫೆಬ್ರವರಿ 22ರಂದು ಮೆರವಣಿಗೆ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಿಂದ ದಕ್ಷಿಣ ವಾಹಿನಿ ಹೊರೆಕಾಣಿಕೆ ಸಮರ್ಪಣೆಯು ಹೆಜಮಾಡಿ ಗಡಿ ದಾಟಿ ಮೂಳೂರು ಕೊಪ್ಪಲಂಗಡಿಗೆ ಬಂದು ಅಲ್ಲಿಂದ ಹೊಸ ಮಾರಿಗುಡಿ ದೇವಳವನ್ನು ತಲುಪಲಿದೆ.
ಫೆಬ್ರವರಿ 23ರಂದು ಉಡುಪಿ ಜಿಲ್ಲೆಯಿಂದ ಸಮರ್ಪಿಸಲ್ಪಡುವ ಉತ್ಸರವಾಹಿನಿ ಹೊರೆಕಾಣಿಕೆಯು ಪಾಂಗಾಳ ಸೇತುವೆ ಬಳಿಯಿಂದ ಹೊಸ ಮಾರಿಗುಡಿ ತಲುಪಲಿದೆ.
ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ಸಂದರ್ಭದಲ್ಲಿ ವಿವಿಧ ಬಿರುದಾವಳಿಗಳೊಂದಿಗೆ ಬೃಹತ್ ಶೋಭಾಯಾತ್ರೆ ನಡೆಯಲಿದೆ.
ಈ ಸಂದರ್ಭ ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಹೊರೆ ಕಾಣಿಕೆ ಸಮರ್ಪಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಪಾದೂರು, ಉಪಾಧ್ಯಕ್ಷರಾದ ಶ್ರೀಕರ ಶೆಟ್ಟಿ ಕಲ್ಯ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಾಧವ ಪಾಲನ್, ಯೋಗೀಶ್ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಅರುಣ್ ಶೆಟ್ಟಿ ಪಾದೂರು, ಶ್ರೀಕರ ಶೆಟ್ಟಿ ಕಲ್ಯ,ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ಡಾ. ಸುನೀತಾ ಶೆಟ್ಟಿ, ಮೋಹನ ಬಂಗೇರ, ಶಾಂತಲತಾ ಶೆಟ್ಟಿ, ಅನಿಲ್ ಕುಮಾರ್, ಅವಿನಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.