ಕಾಪು : ತಾಲೂಕಿನ ಕುತ್ಯಾರು ಮೂಲ್ಯರ ಯಾನೆ ಕುಲಾಲರ ಸಂಘ (ರಿ.) ಕುತ್ಯಾರು ಇದರ ವಾರ್ಷಿಕೋತ್ಸವ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಫೆ. 23 ರ ಭಾನುವಾರ ಕುತ್ಯಾರು ರಾಮೋಟ್ಟು ಬನತೋಡಿ ಗದ್ದೆಯಲ್ಲಿ ನಡೆಯಲಿದ್ದು, ಸಮುದಾಯದ ಪ್ರಮುಖರು, ಊರಿನ ಗಣ್ಯರ ಜೊತೆಗೆ, ಕುಲಾಲ ಸಮುದಾಯದ ಇಬ್ಬರನ್ನು ಸನ್ಮಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶೈಲೇಶ್ ಕುಲಾಲ್ ಮತ್ತು ಪ್ರಮುಖರು ಪ್ರಕಟನೆಯಲ್ಲಿ ತಿಳಿಸಿರುವರು.