ಕಾಪು : ಪರಿವಾರ ನಾಯಕ ಸಮಾಜದ ವತಿಯಿಂದ ಹಸಿರು ಹೊರೆಕಾಣಿಕೆ
Posted On:
24-02-2025 07:35AM
ಕಾಪು : ಕಾಪುವಿನ ಅಮ್ಮನ ಬ್ರಹ್ಮಕಲಶೋತ್ಸಕ್ಕೆ ಕಾಪು ತಾಲೂಕಿನ ಪರಿವಾರ ನಾಯಕ ಸಮಾಜದ ವತಿಯಿಂದ ಪಯ್ಯಾರು ಕಾಂತನಾಧಿಕಾರಿ ಧೂಮಾವತಿ ಧೈವಸ್ಥಾನದಿಂದ ಹಸಿರು ಹೊರೆಕಾಣಿಕೆಯನ್ನು ಶ್ರೀ ದೇವಳಕ್ಕೆ ಸಮರ್ಪಿಸಲಾಯಿತು.
ಸಜಾತಿ ಬಾಂಧವರಿಂದ ಒಟ್ಟುಗೂಡಿದ 17.50 ಕ್ವಿಂಟಾಲ್ ಅಕ್ಕಿ , 544 ಕೆ.ಜಿ. ಬೆಲ್ಲ , 43 ಲೀಟರ್ ದೀಪದೆಣ್ಣೆ ,225 ತೆಂಗಿನಕಾಯಿ , 550 ಬಾಳೆಎಲೆ ಮತ್ತು ಬಾಳೆಗೊನೆ , ತುಪ್ಪ ಮೊದಲಾದ ವಸ್ತುಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಗೋಪಾಲ್ ನಾಯ್ಕ್ , ಕಾಪು ತಾಲೂಕು ಪರಿವಾರ ನಾಯಕ ಸಮಾಜದ ಅಧ್ಯಕ್ಷರಾದ ನೀಲಾನಂದ ನಾಯ್ಕ್, ಹಿರಿಯರು, ಪದಾಧಿಕಾರಿಗಳು ಹಾಗೂ ಸಜಾತಿ ಬಾಂಧವರು ಉಪಸ್ಥಿತರಿದ್ದರು.