ಶಿರ್ವ : ಮಣಿಪುರ ಕೂಡುರಸ್ತೆಯಲ್ಲಿ ವೈಜ್ಞಾನಿಕ ಮಾದರಿಯ ರೋಟರಿ ಸರ್ಕಲ್ ಉದ್ಘಾಟನೆ
Posted On:
24-02-2025 05:06PM
ಶಿರ್ವ : ಮಣಿಪುರ ರೋಟರಿ ಸಂಸ್ಥೆಯ ವತಿಯಿಂದ ಅಂತಾರಾಷ್ಟ್ರೀಯ ರೋಟರಿಯ 121ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಮಣಿಪುರ ಪೇಟೆಯಲ್ಲಿ ವೈಜ್ಞಾನಿಕ ಮಾದರಿಯಲ್ಲಿ ನಿರ್ಮಿಸಿದ ರೋಟರಿ ಶಾಂತಿ ವೃತ್ವನ್ನು ರೋಟರಿ ಅ. ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ಸಿಎ.ದೇವ್‌ಆನಂದ್ ಉದ್ಘಾಟಸಿದರು.
ಈ ಸಂದರ್ಭ ಅವರು ಮಾತನಾಡಿ, ರೋಟರಿಯ ಜಿಲ್ಲಾಯೋಜನೆ ರಸ್ತೆ ಸುರಕ್ಷಾ ಜಾಗೃತಿ ಹಾಗೂ ರೋಟರಿ ವರ್ಚಸ್ಸನ್ನು ವೃದ್ಧಿಸುವ ನಿಟ್ಟಿನಲ್ಲಿ ಕೈಗೊಂಡ ಅತ್ಯುತ್ತಮ ಕಾರ್ಯ ಇದಾಗಿದ್ದು, ಮೂರು ಪ್ರಮುಖ ರಸ್ತೆಗಳು ಕೂಡುವ ಈ ಭಾಗದಲ್ಲಿ ರಸ್ತೆಗೆ ಬೆಳಕು, ರಸ್ತೆ ಸೂಚನಾ ಫಲಕಗಳು ಹಾಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಪ್ರಯೋಜನವಾಗುವ ಸ್ತುತ್ಯ ಕಾರ್ಯವನ್ನು ಮಾಡಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಛೇರಿಯ ಪ್ರಬಂಧಕ ನಿರಂಜನ ಆಚಾರ್ಯ, ರೋಟರಿ ಜಿಲ್ಲಾ ಪ್ರಥಮ ಮಹಿಳೆ ರೇಖಾ ದೇವಾನಂದ್, ವಲಯದ ಎಲ್ಲಾ ರೋಟರಿ ಪದಾಧಿಕಾರಿಗಳು, ಕ್ಲಬ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಶಾಂತಿ ಸಂಗಮ -2025 : ರೋಟರಿ ಭವನದಲ್ಲಿ ಜಿಲ್ಲಾ ವಲಯ ಐದರ ರೋಟರಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜರುಗಿದ ಶಾಂತಿ ಸಂಗಮ -2025 ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ವೃತ್ತಿಸೇವಾ ಜಾಗೃತಿ ಸಮಿತಿಯ ಜಿಲ್ಲಾ ಛರ‍್ಮನ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ವಿಶ್ವ ಶಾಂತಿಗಾಗಿಯೇ ಸಂಘಟನೆಗೊಂಡ ಅಂತಾರಾಷ್ಟ್ರೀಯ ರೋಟರಿ ಕಳೆದ 120 ವರ್ಷಗಳಲ್ಲಿ ಯಾವುದೇ ಜಾತಿ, ಮತ, ಧರ್ಮ, ವರ್ಣ ರಾಜಕೀಯದ ಲೇಪವಿಲ್ಲದೆ ಜಾಗತಿಕ ಶಾಂತಿ ಮತ್ತು ಮನುಕುಲದ ಸೇವೆಗಾಗಿ ಅರ್ಪಣಾ ಮನೋಭಾವದಿಂದ ನೂರಾರು ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮಣಿಪುರ ರೋಟರಿ ಅಧ್ಯಕ್ಷ ಸುಧೀರ್ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ವಲಯ ಸಹಾಯಕ ಗವರ್ನರ್ ಅನಿಲ್ ಡೇಸಾ, ವಲಯ ತರಬೇತುದಾರ ಶೈಲೇಂದ್ರ ರಾವ್, ವಲಯ ಸೇನಾನಿಗಳಾದ ಮೆಲ್ವಿನ್ ಡಿಸೋಜ, ಸುರೇಶ್ ನಾಯಕ್, ಜೋನ್ ಸಿಕ್ವೇರಾ, ವಲಯ ಕಾರ್ಯದರ್ಶಿ ಚಂದ್ರ ಪೂಜಾರಿ, ಕ್ಲಬ್ ಕಾರ್ಯದರ್ಶಿ ಗುರುರಾಜ್ ಭಟ್, ವಲಯ ನಿರ್ದೇಶಕ ಶೇಖರ ಎಚ್, ಕ್ಲಬ್ ಸೇನಾ ನಿರ್ದೇಶಕ ಮೊಹಮ್ಮದ್ ಶರೀಫ್,ಶುಭ ಹಾರೈಸಿದರು. ಚಂದ್ರಶೇಖರ ಸಾಲಿಯಾನ್ ನಿರೂಪಿಸಿದರು. ವಲಯ ಕಾರ್ಯದರ್ಶಿ ಚಂದ್ರ ಪೂಜಾರಿ ವಂದಿಸಿದರು.