ಕಾಪು ಶ್ರೀ ಹೊಸ ಮಾರಿಗುಡಿ ಪ್ರತಿಷ್ಠಾ ಬ್ರಹ್ಮಲಕಶೋತ್ಸವ : ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
Posted On:
25-02-2025 10:27PM
ಕಾಪು : ಭಾರತದಲ್ಲಿ ಸಮುದಾಯಕ್ಕಿಂತ ಮೀರಿದ್ದು ಧರ್ಮ. ಹಿಂದು ಧರ್ಮ ದೇಶಕ್ಕೆ ಅವಶ್ಯಕ. ತಾಯಿ ಸ್ವರೂಪಿಯಾದ ಮಾರಿಯಮ್ಮ ದೊಡ್ಡ ಶಕ್ತಿ. ತಾಯಿಯನ್ನು ನೋಡಲು ಗರ್ಭ ಗುಡಿಗೆ ಪ್ರವೇಶ ಮಾಡಿ ಸಮೀಪದಿಂದ ನೋಡುವ ಭಾಗ್ಯ ಸಮಾನತೆಯ ಪ್ರತೀಕವಾಗಿದೆ ಎಂದು ಬೆಳಗಾವಿಯ ಹಿರೇಮಠ ಹುಕ್ಕೇರಿ ಶ್ರೀ ಗುರು ಶಾಂತೇಶ್ವರ ಸಂಸ್ಥಾನದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದಶ್ರೀರು.
ಅವರು ಮಂಗಳವಾರ ಸಂಜೆ ಕಾಪು ಶ್ರೀ ಹೊಸ ಮಾರಿಗುಡಿ ದೇವಳದ ಪ್ರತಿಷ್ಠಾ ಬ್ರಹ್ಮಲಕಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವದಿಸಿದರು.
ವೇದಿಕೆಯಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಉದ್ಯಮಿ ಉದಯ ಸುಂದರ ಶೆಟ್ಟಿ, ಉದ್ಯಮಿ ನಾರಾಯಣ ಶೆಟ್ಟಿ ಮುಂಬೈ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ
ರವಿ ಶೆಟ್ಟಿಗಾರ್, ದೇವಳದ ಅಭಿವೃದ್ಧಿ ಸಮಿತಿ ಮಾಧವ ಆರ್ ಪಾಲನ್ ಉಪಸ್ಥಿತರಿದ್ದರು.
ಯೋಗೀಶ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಶೋಕ್ ಪಕ್ಕಳ ಮುಂಬೈ, ದಾಮೋದರ ಶರ್ಮ
ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಟೇಶ ನೃತ್ಯನಿಕೇತನ ಉಚ್ಚಿಲ-ವಿದುಷಿ ಮಂಗಳಾ ಕಿಶೋರ್ ದೇವಾಡಿಗ ಮತ್ತು ಬಳಗದವರಿಂದ
ನೃತ್ಯ ವೈಭವ, ತೋನ್ಸೆ ಪುಷ್ಕಳ ಕುಮಾರ್ ಮತ್ತು ಬಳಗದವರಿಂದ ಭಕ್ತಿ ನಾಮಾಮೃತಂ, ಜಗದೀಶ್ ಪುತ್ತೂರು ಬಳಗದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಜರಗಿತು.