ಕಾಪು : ಶಿರ್ವ ಸಮೀಪದ ಪಳ್ಳಿ ಶ್ರೀಕ್ಷೇತ್ರ ಅಡಪಾಡಿ ಉಮಾಮಹೇಶ್ವರ, ಶ್ರೀದುರ್ಗಾಪರಮೇಶ್ವರೀ ದೇವೀ ಸನ್ನಿಧಿಯಲ್ಲಿ ಜರುಗುತ್ತಿರುವ ಮಹಾಶಿವರಾತ್ರಿ, ಮತ್ತು ರಥೋತ್ಸವ ಸಂದರ್ಭದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ವಿಜೇತ ಖ್ಯಾತ ಸ್ಯಾಕ್ಸೋಫೋನ್ ಹಾಗೂ ನಾಗಸ್ವರ ವಾದಕ ಸುನಿಲ್ ಸೇರಿಗಾರ ಸೂಡ ಮತ್ತು ಕ್ಷೇತ್ರದ ದೈವ ನರ್ತಕ ರವಿ ಪಾನಾರ ಪಡ್ಡಂ ಇವರ ಪುತ್ರಿ ಬಹುಮುಖ ಪ್ರತಿಭಾ ಸಂಪನ್ನೆ ಯಕ್ಷಗಾನ, ಭರತನಾಟ್ಯ, ಕರಾಟೆಪಟು ಕು. ಶ್ರೀನಿಧಿ ಪಾನಾರ ಇವರನ್ನು ಕ್ಷೇತ್ರದ ವತಿಯಿಂದ ಧರ್ಮದರ್ಶಿಗಳಾದ ಪುಂಡಲೀಕ ನಾಯಕ್ ಇವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ಕ್ಷೇತ್ರದ ಶಾಸಕರು, ಮಾಜಿ ಸಚಿವ ವಿ.ಸುನಿಲ್ ಕುಮಾರ್, ಆರ್‌ಎಸ್‌ಬಿ ಸಂಘ ಮಣಿಪಾಲ ಇದರ ಅಧ್ಯಕ್ಷರು ಹಾಗೂ ಉದ್ಯಮಿ ಶ್ರೀಶ ನಾಯಕ್ ಪೆರ್ನಂಕಿಲ, ಉದ್ಯಮಿ ರಾಜಶೇಖರ ಚೌಟ ದುಬೈ, ಮಂಜುನಾಥ ಶೆಟ್ಟಿ ಉದ್ಯಮಿ ಮುಂಬಯಿ, ಬಾಲಕೃಷ್ಣ ಪ್ರಭು ಮಣಿಪಾಲ, ನೀರೆ ವ್ಯ,ಸೇ.ಸ.ಸಂಘದ ಅಧ್ಯಕ್ಷ ನೀರೆ ರವೀಂದ್ರ ನಾಯಕ್ ವೇದಿಕೆಯಲ್ಲಿದ್ದರು.