ಕಾಪು : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ
ಮಾರಿಯಮ್ಮನ ಬ್ರಹ್ಮಕಲಶಾಭಿಷೇಕವು ವಿಜ್ರಂಭಣೆಯಿಂದ ಭಕ್ತರ ಸಮ್ಮುಖದಲ್ಲಿ
ಬುಧವಾರ ಸಂಪನ್ನಗೊಂಡಿತು.
ಕೊರಂಗ್ರಪಾಡಿ ವೇ.ಮೂ. ಕೆ ಜಿ. ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ಜ್ಯೋತಿಷ್ಯ ವಿದ್ವಾನ್ ಕೆ.ಪಿ ಕುಮಾರ ಗುರು ತಂತ್ರಿಗಳ ನೇತೃತ್ವದಲ್ಲಿ ಅರ್ಚಕರಾದ ವೇ.ಮೂ. ಕಲ್ಯ ಶ್ರೀನಿವಾಸ ತಂತ್ರಿಗಳ ಸಹಯೋಗದೊಂದಿಗೆ ಬೆಳಿಗ್ಗೆ ಮಂಗಲಗಣಯಾಗ, ಶಾಂಭವೀಕಲಾ ಮಾತೃ ಕಾರಾಧನಮ್, ಕಾಲ ರಾತ್ರಿ ಕಲಾಮಾತೃಕಾ ಮಂಡಲಾರ್ಚನಮ್, ಕಾಪು ಮಾರಿಯಮ್ಮನ ಮಹಾ ಬ್ರಹ್ಮಕಲಶಾಭಿಷೇಕ, ಪ್ರತ್ಯಂಗಿರಾ ಕಲಾಮಾತೃಕಾ ಮಂಡಲಪೂಜನಮ್, ನ್ಯಾಸ ಪೂಜಾ ಮಹಾಪೂಜಾ ಮಂಗಲ ಮಂತ್ರಾಕ್ಷತೆ ಜರಗಿತು.
ಪಲ್ಲ ಪೂಜೆ ನಡೆದ ಬಳಿಕ ಮಹಾ ಅನ್ನ ಸಂತರ್ಪಣೆ ನಡೆಯಿತು.
ಉಡುಪಿ, ದ.ಕ, ಮುಂಬಯಿ, ವಿದೇಶದಿಂದಲೂ ಬಂದ ಲಕ್ಷಾಂತರ ಮಂದಿ ಭಕ್ತರು ಶ್ರೀ ಮಾರಿಯಮ್ಮನ ದರ್ಶನ ಪಡೆದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಬ್ರಹ್ಮ ಕಲಶೋತ್ಸವ ಸಮಿತಿಯ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಕಾಪು ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರು ಗುರ್ಮೆ ಸುರೇಶ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಕಾಪು ದಿವಾಕರ ಶೆಟ್ಟಿ ಕೊತ್ವಾಲ ಗುತ್ತು, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಮೆಂಡನ್, ರಘುಪತಿ ಭಟ್, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಮಾಧವ ಆರ್ ಪಾಲನ್, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಗಂಗಾಧರ ಸುವರ್ಣ, ಮನೋಹರ್ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ರವಿಕಿರಣ್, ಸದಸ್ಯರುಗಳಾದ ಕೆ.ಚಂದ್ರಶೇಖರ್ ಅಮೀನ್, ನಿರ್ಮಲ್ ಕುಮಾರ್ ಹೆಗ್ಡೆ, ಯೋಗೀಶ್ ವಿ. ಶೆಟ್ಟಿ, ರಾಜೇಶ್ ಕಾಂಚನ್, ವಿದ್ಯಾಧರ್ ಪುರಾಣಿಕ್, ಬ್ರಹ್ಮ ಕಲಶೋತ್ಸವ ಸಮಿತಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಉದಯ್ ಸುಂದರ ಶೆಟ್ಟಿ, ಜಯ ಸಿ. ಕೋಟ್ಯಾನ್, ಭಾಸ್ಕರ್ ಎಮ್. ಸಾಲಿಯಾನ್, ಭಗವಾನ್ ದಾಸ್ ಶೆಟ್ಟಿಗಾರ್, ಯೋಗೀಶ್ ಪಿ ಶೆಟ್ಟಿ ಬಾಲಾಜಿ, ಪ್ರಧಾನ ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ, ಜೊತೆ ಕಾರ್ಯದರ್ಶಿ ಅರುಣ್ ಶೆಟ್ಟಿ ಪಾದೂರು, ಕೋಶಾಧಿಕಾರಿ ಸಿಎ ಸುದೇಶ್ ರೈ, ವ್ಯವಸ್ಥಾಪನಾ ಸಮಿತಿ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು ಸದಸ್ಯರುಗಳಾದ ಶ್ರೀನಿವಾಸ ತಂತ್ರಿ ಕಲ್ಯ, ಶೇಖರ್ ಸಾಲಿಯಾನ್, ಮನೋಹರ್ ರಾವ್, ರವೀಂದ್ರ ಮಲ್ಲಾರ್, ಶ್ರೀಧರ್ ಕಾಂಚನ್, ಜಯಲಕ್ಷ್ಮಿ ಶೆಟ್ಟಿ, ಚರಿತ ದೇವಾಡಿಗ, ಮುಂಬಯಿ ಸಮಿತಿ ಅಲ್ಲದೆ ಇತರ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾವಿರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.
ಧಾರ್ಮಿಕ ಸಭಾ ಕಾರ್ಯಕ್ರಮದ ಜೊತೆಗೆ ಖ್ಯಾತ ಸ್ಯಾಕ್ಸೋಫೋನ್ ವಾದಕಿ ಭಾರತಿ ಗೋಪಾಲ್ ಶಿವಪುರ ಇವರಿಂದ ಸ್ಯಾಕ್ಸೋಫೋನ್ ವಾದನ ಮತ್ತು ಖ್ಯಾತ ಸಂಗೀತ ಕಲಾವಿದ ರಘು ದೀಕ್ಷಿತ್ ಮತ್ತು ಬಳಗದವರಿಂದ ಸಂಗೀತ ಸಂಜೆ ಜರಗಿತು.