ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು‌ ಲಯನ್ಸ್ ಕ್ಲಬ್ : ಜಿಲ್ಲಾ ಗವರ್ನರ್ ಭೇಟಿ

Posted On: 10-03-2025 11:20PM

ಕಾಪು : ಕಾಪು‌ ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ಭೇಟಿ ಕಾರ್ಯಕ್ರಮ ಸೋಮವಾರ ಕಾಪುವಿನ K1 ಹೋಟೆಲ್ ಸಭಾಂಗಣದಲ್ಲಿ ಜರಗಿತು. ಜಿಲ್ಲಾ ಗವರ್ನರ್ ಹನೀಫ್ ಮೊಹಮ್ಮದ್ ರವರು ಮಾತನಾಡಿ, ಕಾಪು ಲಯನ್ಸ್ ಸುಮಾರು 48 ವರ್ಷಗಳ ಇತಿಹಾಸವುಳ್ಳ ಕ್ಲಬ್ ಆಗಿದು, ಉತ್ತಮ ಸಮಾಜ ಸೇವೆ ಮಾಡುವ ಮೂಲಕ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಕ್ಲಬ್ಬಿಗೆ ಒಳ್ಳೆಯ ಸದಸ್ಯರನ್ನು ಸೇರಿಸಿ ಗೋಲ್ಡನ್ ಜುಬ್ಲಿಯನ್ನು ಆಚರಿಸುವಂತಾಗಲಿ ಎಂದು ಹಾರೈಸಿದರು.

ಸನ್ಮಾನ : ಕರ್ನಾಟಕ ಸರಕಾರದಿಂದ ಕಾಪು ನಗರ ಯೋಜನಾ ಪ್ರಾಧಿಕಾರಕ್ಕೆ ಆಯ್ಕೆಯಾದ ಹರೀಶ್ ನಾಯಕ್ ಕಾಪು ರವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಪ್ರಥಮ ಉಪ ಡಿಸ್ಟ್ರಿಕ್ಟ್ ಗವರ್ನರ್ ಸಪ್ನಾ ಸುರೇಶ್ ರವರು ಕಾಪು ಕ್ಲಬ್ಬಿನ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಶೆಟ್ಟಿ , ಕ್ಯಾಬಿನೆಟ್ ಸೆಕ್ರೆಟರಿ ಗಿರೀಶ್ ರಾವ್, ವಲಯ ಅಧ್ಯಕ್ಷ ಮೇಲ್ವಿನ್ ಮ್ಯಾಕ್ಸಿಮ್ ಡಿಸೋಜಾ, ಎಲ್‌ಸಿಎಫ್ ಕೋಆರ್ಡಿನೇಟರ್ ಹರಿಪ್ರಸಾದ್ ರೈ, ಶೇಖರ್ ಶೆಟ್ಟಿ, ಚಾರ್ಟರ್ ಸದಸ್ಯ ಡಾ. ಗಂಗಾಧರ್ ಶೆಟ್ಟಿ, ನಾಗರಾಜ ರಾವ್ ಉಪಸ್ಥಿತರಿದ್ದರು.

ಅಧಕ್ಷರಾದ ಉದಯ ಶೆಟ್ಟಿ ಸ್ವಾಗತಿಸಿ, ಪ್ರಾಂತ್ಯ ಅಧ್ಯಕ್ಷರಾದ ವರುಣ್ ಶೆಟ್ಟಿ ವರದಿ ವಾಚಿಸಿದರು. ಕಾರ್ಯದರ್ಶಿ ಸಂತೋಷ್ ಶೆಟ್ಟಿ ವಂದಿಸಿದರು.