ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ : 21ನೇ ವರ್ಷದ ಸಂಭ್ರಮ ಕಲಾಸಂಗಮ -2025

Posted On: 11-03-2025 10:50AM

ಉಡುಪಿ : ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ಇದರ 21ನೇ ವರ್ಷದ ಸಂಭ್ರಮ ಕಲಾಸಂಗಮ -2025 ಕಾರ್ಯಕ್ರಮವು ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಸರ್ವೋದಯ ಶೆಟ್ಟಿಗಾರ್ ಪರ್ಕಳ ಮತ್ತು ಸ್ವಾಗತ ಹೋಟೆಲ್ ಮಾಲಕ ಮೋಹನ್ ದಾಸ್ ನಾಯಕ್ ಪರ್ಕಳ ಉದ್ಘಾಟಿಸಿ ಶುಭ ಹಾರೈಸಿದರು.

ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ಗೌರವಾಧ್ಯಕ್ಷರಾದ ಶ್ರೀನಿವಾಸ ಉಪಾಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮದ್ವರಾಜ್, ತುಳು ಚಲನಚಿತ್ರ, ನಾಟಕ ಕಲಾವಿದ ಭೋಜರಾಜ ವಾಮಂಜೂರು, ಆಧುನಿಕ ಭಗೀರಥ ಪದ್ಮಶ್ರೀ ಅಮೈ ಮಾಲಿಂಗ ನಾಯ್ಕ್, ಚಲನಚಿತ್ರ ನಟ ಯೋಗೇಶ್ ಶೆಟ್ಟಿ ಧರ್ಮೆಮಾರ್, ಕವಿ ಸಾಹಿತಿ ವಸಂತ್ ಕುಮಾರ್ ಪೆರ್ಲ, ಬೂಧ ಶೆಟ್ಟಿಗಾರ್, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಘವೇಂದ್ರ ಪ್ರಭು ಕರ್ವಾಲು, ಎಂ ಮನೋಹರ್, ಮಹೇಶ್ ಮರ್ಣೆ, ಕೇಶವ ಕೋಟ್ಯಾನ್ ಇವರನ್ನು ಸನ್ಮಾನಿಸಲಾಯಿತು.

ಸಾನ್ವಿ ಪ್ರಾರ್ಥಿಸಿದರು. ರವೀಂದ್ರ ನಾಯಕ್ ಸಣ್ಣಕಿಬೆಟ್ಟು ಸ್ವಾಗತಿಸಿದರು. ಶ್ರೀನಿವಾಸ್ ನಾಯಕ್ ಚಕ್ರತೀರ್ಥ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತೋನ್ಸೆ ಪುಷ್ಕಲ್ ಕುಮಾರ್ ಇವರಿಂದ ಹರಿಕಥಾ ಕಾಲಕ್ಷೇಪ, ಮಹಾಲಿಂಗೇಶ್ವರ ನಾಟ್ಯ ತಂಡ ಇವರಿಂದ ದೀಕ್ಷಾ ಗುಂಡುಪಾದೆ ಇವರ ನಿರ್ದೇಶನದಲ್ಲಿ ನೃತ್ಯರೂಪಕ, ಸಿಂಚನ ಮ್ಯೂಸಿಕಲ್ಸ್ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.