ಮುದರಂಗಡಿ : ಸ್ತ್ರೀಯರಿಗಾಗಿ ಆರೋಗ್ಯ ಮಾಹಿತಿ ಕಾರ್ಯಾಗಾರ
Posted On:
28-03-2025 04:41PM
ಮುದರಂಗಡಿ : ಜನನಿ ಮಹಾಸಂಘ ಮತ್ತು ಕಥೊಲಿಕ್ ಸ್ತ್ರೀ ಸಂಘಟನೆ ಮುದರಂಗಡಿ ವತಿಯಿಂದ ಸ್ಥಳೀಯ ಸ್ತ್ರೀಯರಿಗಾಗಿ ಸ್ತ್ರೀಯರ ಋತುಬಂಧ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಮಾಹಿತಿ ಕಾರ್ಯಗಾರವು ಸಂತ ಫ್ರಾನ್ಸಿಸ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಫಾದರ್ ಮುಲ್ಲರ್ ಹೋಮಿಯೋಪತಿ ಮೆಡಿಕಲ್ ಕಾಲೇಜ್ ನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಧೀರಜ್ ಫೆರ್ನಾಂಡಿಸ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಸ್ತ್ರೀಯರಲ್ಲಿ ಋತುಸ್ರಾವ, ಋತುಬಂಧದ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.
ಚರ್ಚ್ ನ ಧರ್ಮಗುರು ಪೂಜ್ಯ ಫ್ರೆಡ್ರಿಕ್ ಡಿಸೋಜಾ ರವರು ಉಪಸ್ಥಿತರಿದ್ದರು.
ಅಧ್ಯಕ್ಷೆ ಸಮಿತಾ ಮೆಂಡೋನ್ಸಾ ರವರು ಸ್ವಾಗತಿಸಿ, ಪ್ರಮೋದಾ ಮತಾಯಸ್ ವಂದಿಸಿದರು.