ಸ.ಹಿ.ಪ್ರಾ.ಶಾಲೆ ಎರ್ಮಾಳು ಸೌತ್ ಶಾಲೆಗೆ ರೋಬೋ ಸಾಫ್ಟ್ ಸಂಸ್ಥೆಯಿಂದ ಪ್ರಾಜೆಕ್ಟರ್, ಲ್ಯಾಪ್ಟಾಪ್ ಹಸ್ತಾಂತರ
Posted On:
30-03-2025 08:05AM
ಎರ್ಮಾಳು : ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎರ್ಮಾಳು ಸೌತ್ ಶಾಲೆಗೆ ರೋಬೋ ಸಾಫ್ಟ್ ಸಂಸ್ಥೆಯವರು ನೀಡಿರುವ ಪ್ರಾಜೆಕ್ಟರ್ ಮತ್ತು ಲ್ಯಾಪ್ಟಾಪನ್ನು ರೋಬೋಸಾಫ್ಟ್ ಸಂಸ್ಥೆಯ ಕಾರ್ತಿಕ್ ಕೋಟ್ಯಾನ್ ರವರು ಶಾಲಾ ಮುಖ್ಯ ಶಿಕ್ಷಕಿಗೆ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ರೋಬೋ ಸಾಫ್ಟ್ ಸಂಸ್ಥೆಯ ಕಾರ್ತಿಕ್ ಕೋಟ್ಯಾನ್ ರವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿಯಾದ ಶಾಂತಲಾ ದೇವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ರೋಬೋಸಾಫ್ಟ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಿ.ಆರ್.ಪಿ. ಸತೀಶ್ಚಂದ್ರ, ಸಹ ಶಿಕ್ಷಕರಾದ ಕುಮಾರ್, ಪದ್ಮಲತಾ ಹಾಗೂ ಗೌರವ ಶಿಕ್ಷಕಿ ಸಿಂಚನ ಮತ್ತು ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕ ಸತೀಶ್ಚಂದ್ರ ಸ್ವಾಗತಿಸಿದರು.
ಮುಖ್ಯ ಶಿಕ್ಷಕಿ ಶಾಂತಲಾ ದೇವಿ ಪ್ರಸ್ತಾವನೆಗೈದರು.
ಶಿಕ್ಷಕ ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಸಿಂಚನ ವಂದಿಸಿದರು.