ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಎಸ್ ಕೆ ಪಿ ಎ ಕಾಪು ವಲಯ : ಛಾಯಾ ಟ್ರೋಫಿ - 2025 ಉದ್ಘಾಟನೆ

Posted On: 31-03-2025 08:31AM

ಕಾಪು : ಸಂಘಟನೆಗಳು ಸದಸ್ಯರಿಗೆ ಒಗ್ಗಟ್ಟಿನ ಬಲದೊಂದಿಗೆ ನೈತಿಕ ಬೆಂಬಲವನ್ನು ನೀಡಬೇಕು. ಸೋತು ಗೆದ್ದಾಗ ಸಿಗುವ ಖುಷಿ ನಮ್ಮದಾಗಬೇಕು. ಸ್ಪರ್ಧಾತ್ಮಕತೆಯ ಯುಗದಲ್ಲಿ ತಾಂತ್ರಿಕತೆಗೆ ಅನುಗುಣವಾಗಿ ನಾವೂ ಹೊಂದಾಣಿಕೆ ಮಾಡಬೇಕಾಗಿದೆ ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಕಾಪು ವಲಯ ಇವರ ಆಶ್ರಯದಲ್ಲಿ ಆದಿತ್ಯವಾರ ಕಟಪಾಡಿ ಎಸ್.ವಿ.ಎಸ್ ಕಾಲೇಜು ಮೈದಾನದಲ್ಲಿ ಪ್ರಪ್ರಥಮ ಬಾರಿಗೆ ಜರಗಿದ ಹೊನಲು ಬೆಳಕಿನ ಲೀಗ್ ಮಾದರಿಯ ಜಿಲ್ಲಾ ಮಟ್ಟದ ವಾಲಿಬಾಲ್ ಮತ್ತು ಹಗ್ಗ-ಜಗ್ಗಾಟ ಪಂದ್ಯಾಟ ಛಾಯಾ ಟ್ರೋಫಿ - 2025 ಉದ್ಘಾಟಿಸಿ ಮಾತನಾಡಿದರು.

ಕಟಪಾಡಿ ಎಸ್ ವಿ ಎಸ್ ವಿದ್ಯಾವರ್ದಕ ಸಂಘದ ಸಂಚಾಲಕ ಸತ್ಯೇಂದ್ರ ಪೈ, ಶ್ರೀ ಮಹಾಲಕ್ಷ್ಮೀ ದೇವಾಸ್ಥಾನ ಉಚ್ಚಿಲದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉದ್ಯಮಿ ದೀಪಕ್ ಎರ್ಮಾಳು, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ, ಬಿಲ್ಲವ ಪರಿಷತ್ ಮಹಿಳಾ ಘಟಕ ಮಾಜಿ ಅಧ್ಯಕ್ಷೆ ಆಶಾ ಅಂಚನ್, ಸನ್ಮಾನಿತರಾದ ಮಾಜಿ ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ ಪ್ರಕಾಶ್ ರಾವ್ ಮಟ್ಟು ಕಟಪಾಡಿ ಮಾತನಾಡಿದರು.

ಸನ್ಮಾನ/ ಬಹುಮಾನ ವಿತರಣೆ : ಮಾಜಿ ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ ಪ್ರಕಾಶ್ ರಾವ್ ಮಟ್ಟು ಕಟಪಾಡಿ ಇವರನ್ನು ಸನ್ಮಾನಿಸಲಾಯಿತು. ಉಚ್ಚಿಲ ದಸರಾ ಛಾಯಾ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಿತರಾದ ಸಂತೋಷ ಕೊರಂಗ್ರಪಾಡಿ, ವಾಮನ್ ಪಡುಕೆರೆ, ಪ್ರೇಮ್ ರನ್ನು ಗೌರವಿಸಲಾಯಿತು.

ಎಸ್ ಕೆ ಪಿ ಎ ಕಾಪು ವಲಯ ಅಧ್ಯಕ್ಷರಾದ ಸಚಿನ್ ಉಚ್ಚಿಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಸ್ ಕೆ ಪಿ ಎ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಅಧ್ಯಕ್ಷರಾದ ಪದ್ಮಪ್ರಸಾದ್‌ ಜೈನ್, ಉದ್ಯಮಿ ಜಯವಂತ್ ಪ್ರಭು, ಶ್ರೀನಿಧಿ ಕನ್ಸ್ ಸ್ಟ್ರಕ್ಷನ್ ಉಚ್ಚಿಲ ಕರುಣಾಕರ್ ಪೂಜಾರಿ, ಎಸ್ ಕೆ ಪಿ ಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಬಂಟ್ವಾಳ, ಎಸ್ ಕೆ ಪಿ ಎ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೃಷ್ಣ ರಾವ್, ಎಸ್ ಕೆ ಪಿ ಎ ಕಾಪು ವಲಯ ಕರುಣಾಕರ್ ನಾಯಕ್, ಎಸ್ ಕೆ ಪಿ ಎ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ರಂಜಿತ್ ಮೆಂಡನ್, ಹಿರಿಯ ಛಾಯಾಗ್ರಾಹಕ ಸುಭಾಷ್ ಬಲ್ಲಾಳ್, ಚಂದ್ರಹಾಸ ಕೋಟ್ಯಾನ್,ಭಾರಧ್ವಾಜ್, ಕಾಪು ವಲಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್, ಕೋಶಾಧಿಕಾರಿ ಕಿರಣ್ ಕುಮಾರ್ ಕಾಪು, ಕ್ರೀಡಾ ಕಾರ್ಯದರ್ಶಿ ವಿಕ್ರಂ ಭಟ್, ಸಂಘಟನಾ ಕಾರ್ಯದರ್ಶಿ ಪ್ರವೀಣ್ ಪೂಜಾರಿ ಕಾಪು, ಪೂರ್ವಾಧ್ಯಕ್ಷ ವಿರೇಂದ್ರ ಶಿರ್ವ, ಉದಯ ಮುಂಡ್ಕೂರು, ರವಿಕುಮಾರ್ ಕಟಪಾಡಿ, ವಿನೋದ್ ಕಾಂಚನ್, ದೀಪಕ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು. ಕಾಪು ವಲಯದ ಮಾಜಿ ಅಧ್ಯಕ್ಷ ಪ್ರವೀಣ್ ಕುರ್ಕಾಲು ಸ್ವಾಗತಿಸಿದರು. ಶ್ರೀನಿವಾಸ ಐತಾಳ್ ಸನ್ಮಾನ ಪತ್ರ ವಾಚಿಸಿದರು.ರಘುರಾಮ್ ಕೋಟ್ಯಾನ್ ಕುರ್ಕಾಲು ನಿರೂಪಿಸಿ, ರಾಘವೇಂದ್ರ ಭಟ್ ವಂದಿಸಿದರು.