ಈದ್ ಸಂದೇಶ
Posted On:
31-03-2025 08:44AM
ಈದ್ ಉಲ್ ಫಿತ್ರ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಹಬ್ಬ ನಮ್ಮೆಲ್ಲರ ಜೀವನದಲ್ಲಿ ಸಂತೋಷ, ಸಹನೆ, ಶಾಂತಿ, ಪ್ರೀತಿ, ಸಮೃದ್ದಿಯನ್ನು ತರುವಂತಾಗಲಿ. (ಅಮೀನ್ )
ನಿಮ್ಮ ನೆರೆಕರೆಯವರಿಗೆ ಸಂತೋಷ ತರುವವರೆಗೂ, ನೀವು ಸಂಪೂರ್ಣವಾಗಿ ಹಬ್ಬವನ್ನು ಆಚರಿಸಿದವರಾಗಲಾರಿರಿ. (ಪ್ರವಾದಿ ವಚನ) ನಿಜವಾದ ಹಬ್ಬವೆಂದರೆ, ಅದು ಸಮಾಜದಲ್ಲಿರುವ ಪ್ರತಿಯೊಬ್ಬರ ಹೃದಯದಲ್ಲಿ ಸಂಭ್ರಮ ಮೂಡಿಸುವ ಹಬ್ಬವಾಗಿರಬೇಕು.
ಹೌದು, ಭಾರತವೆಂಬುವುದು ಸರ್ವ ಜನಾಂಗದ ಶಾಂತಿಯ ಹೂದೋಟವಾಗಿರುತ್ತದೆ.
ಈ ದೇಶದಲ್ಲಿ ಯಾವುದೇ ಒಂದು ಧರ್ಮದವರಿಗೆ ಹಬ್ಬ ಬಂದರೆ, ಆ ಹಬ್ಬಗಳು, ಉಳಿದ ಎಲ್ಲಾ ಧರ್ಮದವರಿಗೆ ಸಂಭ್ರಮಿಸುವ, ಸಂತೋಷ ಪಡುವ ಮತ್ತು ಆ ಹಬ್ಬಗಳಲ್ಲಿ ಪಾಲ್ಗೊಳ್ಳುವ ಅವಕಾಶ ಮುಕ್ತವಾಗಿರಬೇಕು.
ಹಬ್ಬದ ಅರ್ಥವೇ ಶಾಂತಿ, ಪ್ರೀತಿ ಮತ್ತು ಒಗ್ಗಟ್ಟನ್ನು ಹರಡುವುದು ಆಗಿರುತ್ತದೆ.
ಇದು ಕೇವಲ ಆಚಾರ, ವಿಚಾರಗಳ ಸಂಗತಿಯಾಗಿರದೆ ಎಲ್ಲರ ಹೃದಯಕ್ಕೆ ಮತ್ತು ಮನಸ್ಸಿಗೆ ಹತ್ತಿರವಾಗುವ ಮತ್ತು ಎಲ್ಲರನ್ನೂ ಸಮಾನವಾಗಿ ಗೌರವಿಸುವ, ಹಸಿವು, ದಾಹಗಳನ್ನು ಮರೆಯುವ ಅವಕಾಶವಿರಬೇಕು.
ಹಬ್ಬಗಳು ಎಲ್ಲಾ ಧರ್ಮ, ಜಾತಿ ವರ್ಗಗಳ ನಡುವಿನ ಭಾಂದವ್ಯವನ್ನು ಗಟ್ಟಿಯಾಗಿಸಿ ಸ್ನೇಹ ಮತ್ತು ಒಗ್ಗಟ್ಟನ್ನು ಮೂಡಿಸುವ ಸಂಕೇತವಾಗಬೇಕು.
ಈ ದಿವಸ ಸಮಾಜದಲ್ಲಿ ಯಾರೂ ದುಃಖಿತನಾಗಿರಬಾರದು. " ನಾವೆಲ್ಲಾ ಮಾನವರು, ಪರಸ್ಪರ ಸಹೋದರರು. ನಮ್ಮೆಲ್ಲರ ಸ್ರಷ್ಟಿಕರ್ತ ದೇವನೊಬ್ಬನೇ " ಎಂಬ ಸಂದೇಶವನ್ನು ನೀಡುತ್ತಾ, ಹಬ್ಬದ ಶುಭಮಯ ವಾತಾವರಣ ಎಲ್ಲರ ಮನಸ್ಸಿಗೆ ಶಾಂತಿ ಮತ್ತು ಸಂತೋಷ ನೀಡಲಿ.
ಅನ್ವರ್ ಅಲಿ,
ಅಧ್ಯಕ್ಷರು,
ಜಮಾ ಅತೆ ಇಸ್ಲಾಮಿ ಹಿಂದ್, ಕಾಪು.