ಬಂಟಕಲ್ಲು : ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ (ರಿ.) 92 ಹೇರೂರು, ಬಂಟಕಲ್ಲು ಇಲ್ಲಿನ ವಾರ್ಷಿಕ ಮಹಾಸಭೆಯಲ್ಲಿ 2025-27ನೇ ಸಾಲಿನ ಅವಧಿಗೆ ಕಳೆದ ಕಾರ್ಯಕಾರಿ ಸಮಿತಿಯು ಅವಿರೋಧವಾಗಿ ಪುನರಾಯ್ಕೆಗೊಂಡಿತು.
ಅಧ್ಯಕ್ಷರಾಗಿ ರಾಘವೇಂದ್ರ ಸ್ವಾಮಿ, ಕಾರ್ಯದರ್ಶಿಯಾಗಿ ಚರಣ್ ದೇವಾಡಿಗ, ಉಪಾಧ್ಯಕ್ಷರಾಗಿ ಮಾಧವ ಆಚಾರ್ಯ, ಕೋಶಾಧಿಕಾರಿಯಾಗಿ ಸುಧೀರ್ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಉದಯ ಕರ್ಕೇರ, ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಾಜೇಶ್ ಜೋಗಿ, ದೇವದಾಸ ಜೋಗಿ, ಶ್ರೀಧರ್ ಕಾಮತ್, ಶ್ರೀನಿವಾಸ ದೇವಾಡಿಗ, ದಿನೇಶ್ ದೇವಾಡಿಗ ರವರು ಆಯ್ಕೆಯಾದರು. ಇದರ ಜೊತೆಗೆ ಸಕ್ರಿಯ ಮತ್ತು ಹಿರಿಯ ಸದಸ್ಯರುಗಳ ಸಲಹಾ ಸಮಿತಿಯನ್ನು ಆಯ್ಕೆಗೊಳಿಸಲಾಯಿತು.