ಪಡುಬಿದ್ರಿ : ಭಜನೆಯಿಂದ ಸಾಕ್ಷತ್ ಭಗವದ್ ಸಾಕ್ಷಾತ್ಕಾರವಾಗುವುದು. ಮನ: ಶಾಂತಿ ದೊರಕುವುದು. ಇಂದಿನ ಯುವ ಪೀಳಿಗೆ ಭಜನೆಯಿಂದ ದೂರ ಸರಿಯುತ್ತಿರುವುದು ಬೇಸರದ ಸಂಗತಿಯಾಗಿದೆ. ಮನೆ ಮನೆಗಳಲ್ಲಿ ನಡೆಯುತಿದ್ದ ಭಜನೆಗಳು ನಶಿಸಿ ಹೋಗಿದೆ. ನಮ್ಮ ಸಂಸ್ಕೃತಿ, ಸಂಸ್ಕಾರಗಳು ಬೆಳೆಯ ಬೇಕಾದರೆ ಯುವ ಜನತೆ ಭಜನೆಯತ್ತ ಒಲವು ತೋರಬೇಕಾಗಿದೆ ಎಂದು ನಿವೃತ್ತ ಭಾರತೀಯ ನೌಕಾದಳ ಸೇನಾಧಿಕಾರಿ ನಟರಾಜ್ ಪಿ.ಎಸ್ ಹೇಳಿದರು.
ಅವರು ಕೌಡರಿನ ಹೊಸ ಬೆಳಕು ಆಶ್ರಮದಲ್ಲಿ ರಾಮ ನವಮಿಯ ಅಂಗವಾಗಿ ನಡೆಸಿದ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಂತರ ನಟರಾಜ್ ಪಿ.ಎಸ್ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು. 50 ಕೆ.ಜಿ ಅಕ್ಕಿ , 10 ಕೆ.ಜಿ. ಬೆಲ್ಲ , 10 ಕೆ.ಜಿ ಅವಲಕ್ಕಿ ಮತ್ತು 10 ಕೆ.ಜಿ. ಶಾವಿಗೆಯನ್ನು ಅಶ್ರಮಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ರೋಟರಿ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ಸಂಗೀತ ಕಲಾವಿದರಾದ ಸುಶ್ಮಿತಾ ಎರ್ಮಾಳು, ಸುಪ್ರೀತಾ ಕೋಟ್ಯಾನ್ ಪಾಂಗಾಳ, ಶ್ವೇತಾ ಪಾಲನ್ ಪಾಂಗಾಳ ಮತ್ತು ಹಾರ್ಮೋನಿಯಂ ವಾದಕ ಸುನಿಲ್ ಉಚ್ಚಿಲ, ತಬಲ ವಾದಕ ಸತೀಶ್ ಎರ್ಮಾಳು, ಸಕ್ಷನ್ ಸಾಲ್ಯಾನ್, ಹೊಸ ಬೆಳಕು ಆಶ್ರಮದ ಸಂಸ್ಥಾಪಕಿ ತನುಲಾ ತರುಣ್ ಉಪಸ್ಥಿತರಿದ್ದರು.