ಪಡುಬಿದ್ರಿ : ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ಮೂಡುಕರೆ ಗರಡಿ ಮನೆ ಹೆಜಮಾಡಿ ಇದರ ವಾರ್ಷಿಕ ನೇಮೋತ್ಸವು ಏ. 25, ಶುಕ್ರವಾರ ಮತ್ತು 26, ಶನಿವಾರ ಜರಗಲಿದೆ.
ಏ.25 ರಂದು ಬೆಳಿಗ್ಗೆ 9ಗಂಟೆಗೆ ಗಜಕಂಬ ಮುಹೂರ್ತ, ಬೆಳಿಗ್ಗೆ 11ಗಂಟೆಗೆ ಚಪ್ಪರ ಮುಹೂರ್ತ ಮತ್ತು ಆರೋಹಣ, ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಗಂಟೆ 7.30ಕ್ಕೆ ದೈವದ ಭಂಡಾರ ಇಳಿಯುವುದು ಹಾಗೂ ಕೋರ್ದ್ದಬ್ಬು ದೈವದರ್ಶನ, ರಾತ್ರಿ 10.30ಕ್ಕೆ ಶ್ರೀ ದೈವರಾಜ ಕೋರ್ದ್ದಬ್ಬು ನೇಮೋತ್ಸವ, ರಾತ್ರಿ 1.00 ಕ್ಕೆ ಶಕ್ತಿ ಸ್ವರೂಪಿಣಿ ತನಿಮಾನಿಗ ದೇವಿಯ ನೇಮೋತ್ಸವ ಜರಗಲಿದೆ.
ಏ. 26ರಂದು ಬೆಳಿಗ್ಗೆ 9 ಕ್ಕೆ ಜುಮಾದಿ -ಬಂಟ ದೈವದ ನೇಮೋತ್ಸವ, ಮಧ್ಯಾಹ್ನ 1ಕ್ಕೆ ಗುಳಿಗ ದೈವದ ನೇಮೋತ್ಸವ ಜರುಗಲಿದೆ ಎಂದು ದೈವಸ್ಥಾನದ ಸೇವಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.