ಕಾಪು : ಬೆಳಪುವಿನ ಗ್ರಾಮ ಅಭಿವೃದ್ಧಿಯ ಹರಿಕಾರ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಇವರು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆ ಆಗಿರುವ ಹಿನ್ನೆಲೆಯಲ್ಲಿ ಇವರನ್ನು ಬೆಳಪು ಗ್ರಾಮದ ಸಂಜೀವಿನಿ ಸ್ವಸಹಾಯ ಸಂಘಗಳ ತಂಡದ ವತಿಯಿಂದ ಅಭಿನಂದಿಸಲಾಯಿತು.
ಸಂಜೀವಿನಿ ತಂಡದವರಿಗೆ ವಿಶೇಷವಾದಂತಹ ತರಬೇತು ಕಾರ್ಯಕ್ರಮಕ್ಕೂ ಚಾಲನೆ ನೀಡಿ ಸಂಘದ ಸದಸ್ಯರಿಗೆ ಸ್ವ ಉದ್ಯೋಗಕ್ಕೆ ಒತ್ತು ನೀಡುವುದಾಗಿ ಹಾಗೂ ಅವರ ಉದ್ಯಮಕ್ಕೆ ನಿವೇಶನವನ್ನು ಒದಗಿಸುವಂತಹ ಭರವಸೆಯನ್ನು ನೀಡಿ ಪೂರೈಸಿದ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಇವರನ್ನು ಶ್ಲಾಘಿಸಲಾಯಿತು.