ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪುವಿನಲ್ಲಿ ಕರ್ನಾಟಕ ರಾಜ್ಯ ಮಟ್ಟದ ಅಂಡರ್ 15 ಓಪನ್ ಮತ್ತು ಗರ್ಲ್ಸ್ ಫೀಡೆರೇಟೆಡ್ ಚೆಸ್ ಚಾಂಪಿಯನ್‌ಶಿಪ್ 2025

Posted On: 15-05-2025 04:46PM

ಕಾಪು : ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್ ಕಾಪು ಉಡುಪಿ ವತಿಯಿಂದ ಎಐಸಿಎಫ್ ದೆಹಲಿ, ಕೆಎಸ್ಸಿಎ ಬೆಂಗಳೂರು ಮತ್ತು ಯುಡಿಸಿಎ ಉಡುಪಿ ಮೇರೆಗೆ ಕಾಪುವಿನಲ್ಲಿ ಪ್ರಥಮ ಬಾರಿಗೆ ಮೇ.23 ರಿಂದ ಮೇ.25ರವರೆಗೆ ಕರ್ನಾಟಕ ರಾಜ್ಯ ಮಟ್ಟದ ಅಂಡರ್ 15 ಓಪನ್ ಮತ್ತು ಗರ್ಲ್ಸ್ ಫೀಡೆರೇಟೆಡ್ ಚೆಸ್ ಚಾಂಪಿಯನ್‌ಶಿಪ್ 2025 ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಸಭಾಗೃಹದಲ್ಲಿ ಜರಗಲಿದೆ ಎಂದು ಸಂಸ್ಥೆಯ ಸ್ಥಾಪಕ ಮಾ| ಸಾಕ್ಷಾತ್ ಯು.ಕೆ.ಕಾಪು ಹೇಳಿದರು. ಅವರು ಕಾಪು ಪ್ರೆಸ್ ಕ್ಲಬ್‌ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

3 ವರ್ಷದಿಂದ 15 ವರ್ಷದೊಳಗಿನ ಬಾಲಕ ಬಾಲಕಿಯರು, ಅಂದಾಜು 300 ಚೆಸ್ ಕ್ರೀಡಾಳು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟು 100 ಟ್ರೋಪಿ ಹಾಗೂ ರೂ.50,000/- ನಗದು ಬಹುಮಾನವನ್ನು ನೀಡಲಾಗುವುದು. ವಯೋಮಿತಿ 15 ಬಾಲಕ ಬಾಲಕಿಯರಿಗೆ 10 ರಂತೆ 20 ಟ್ರೋಪಿ ಹಾಗೂ ರೂ.50,000/- ನಗದು ಹಾಗೂ ಚೆಸ್ ಕ್ರೀಡಾಕೂಟಗಳನ್ನು ಪ್ರೋತ್ಸಾಹಿಸಲು ವಯೋಮಿತಿ 7,9,11,13 ರ ಬಾಲಕರಿಗೆ 10, ಬಾಲಕಿಯರಿಗೆ 10 ರಂತೆ 4 ವಿಭಾಗದಲ್ಲಿ 80 ಟ್ರೋಪಿ ಮತ್ತು ವಯೋಮಿತಿ 7 ರಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಳುಗಳಿಗೆ ಟ್ರೋಪಿಯನ್ನು ನೀಡಲಾಗುವುದು.

ವಯೋಮಿತಿ 15ರಲ್ಲಿ ಪ್ರಥಮ ಬಾಲಕರು 4 ಹಾಗೂ ಬಾಲಕಿಯರು 4 ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ರಾಷ್ಟ್ರಮಟ್ಟದ ಪಂದ್ಯದ ನೊಂದಣಿ ಶುಲ್ಕವನ್ನು ನಮ್ಮ ಸಂಸ್ಥೆಯಿಂದ ಭರಿಸಲಾಗುವುದು. ನಮ್ಮ ಸಂಸ್ಥೆಯ 26ನೇ ಚೆಸ್ ಸ್ಪರ್ಧೆಯಲ್ಲಿ ವಯೋಮಿತಿ 15ರ ಒಳಗಿನ ಎಲ್ಲಾ ಕ್ರೀಡಾಳುಗಳು ಭಾಗವಹಿಸಬೇಕಾಗಿ ಕೋರಲಾಗಿದೆ.

ಮೇ.23ರಂದು ಬೆಳಿಗ್ಗೆ ಗಂಟೆ 9ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಕರಾಗಿ, ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರು ಪ್ರಸಾದ್ ಜಿ. ಶೆಣೈ ಕಾಪು ಇವರ ಅಧ್ಯಕ್ಷತೆಯಲ್ಲಿ, ಶ್ರೀಧರ್ ಶೆಣೈ ಕಾಪು, ರಾಮ ನಾಯಕ್, ಪ್ರಭಾಕರ ಪೂಜಾರಿ, ವಿಕ್ರಮ್ ಕಾಪು, ಡಾ. ವ್ಯಾಸರಾಜ ತಂತ್ರಿ, ಡಾ. ಕಲ್ಯಾ ರಾಜ್‌ಗೋಪಾಲ್ ಶೆಣೈ, ಅವಿನಾಶ್ ಶೆಟ್ಟಿ, ಸೀತಾರಾಂ ಭಟ್, ರಾಘವೇಂದ್ರ ವೈ.ಟಿ., ದಿವಾಕರ ಶೆಟ್ಟಿ ಕಾಪು, ಅಶೋಕ್ ಕುಮಾರ್ ಶೆಟ್ಟಿ, ಸುನಿಲ್ ಪೂಜಾರಿ, ಸುಧಾಕರ ಸಾಲ್ಯಾನ್, ಟಿ.ಎನ್. ಮಧುಕರ್ ತುಮಕೂರು, ರಮೇಶ್ ಕೋಟೆ ಭಾಗವಹಿಸಲಿದ್ದಾರೆ. ಸಮಾರೋಪವು ಮೇ.25ರಂದು ಸಂಜೆ ಗಂಟೆ 5ಕ್ಕೆ ನೆರವೇರಲಿದೆ. ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸುವವರು 9341111024 ಕ್ಕೆ ತಿಳಿಸಬಹುದು ಎಂದರು. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಉಮಾನಾಥ ಕಾಪು, ನಿರ್ದೇಶಕಿ ಶ್ರೀಮತಿ ಸೌಂದರ್ಯ ಯು.ಕೆ. ಕಾಪು, ಸಂಸ್ಥೆಯ ಸಲಹೆಗಾರರಾದ ಪೆನ್‌ವಿಲ್ ಸೋನ್ಸ್, ನಾಗೇಶ ಕಾರಂತ್ ಪಾಂಗಾಳ ಉಪಸ್ಥಿತಿಯಿದ್ದರು.