ಕಾಪು : ಮಜೂರು ಮದರಸದಲ್ಲಿ ಮಾದಕ ದ್ರವ್ಯದ ವಿರುದ್ದ ಅಭಿಯಾನ
Posted On:
07-06-2025 01:31PM
ಕಾಪು : ಸಮಾಜದಲ್ಲಿ ಅಮಲು ಪದಾರ್ಥದ ಉಪಯೋಗವು ಜಾಸ್ತಿಯಾಗುತಿದ್ದು ಮಾದಕ ದ್ರವ್ಯ ವಿರುದ್ಧದ ಅಭಿಯಾನಗಳು ಸಮಾಜದ ಕಣ್ಣು ತೆರೆಸಲು ಕಾರಣವಾಗಿರುತ್ತದೆ ಎಂದು ಮಸ್ಜಿದ್ ಅಧ್ಯಕ್ಷರಾದ ಡಾ. ಫಾರೂಕ್ ಚಂದ್ರನಗರ ತಿಳಿಸಿದರು.
ಅವರು ಸಿರಾಜುಲ್ ಹುದಾ ಮದರಸ ಮಜೂರು -ಮಲ್ಲಾರು ಇದರ ವಿದ್ಯಾರ್ಥಿಗಳು ಸುನ್ನಿ ಬಾಲ ಸಂಘ ಇದರ ಅಧೀನದಲ್ಲಿ ನಡೆಸಿದ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದರು.
ಮಜೂರ- ಮಲ್ಲಾರು ದಫ್ ಸಮಿತಿ ಯಂಗ್ಮೆನ್ಸ್ ಸಮಿತಿ, ಸ್ವಲಾತ್ ಸಮಿತಿ ಉತ್ತಮ ಕೆಲಸ ಮಾಡಿ ಜನ ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಜಮಾತ್ ಕತಿಬರಾದ ಅಬ್ದುರಶೀದ್ ಸಖಾಫಿ ಹಾಗೂ ಉಸ್ತಾದುರುಗಳು ಜಮಅತ್ ಸದಸ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.