ಕಾಪು : ರೋಟರಿ ಸಂಸ್ಥೆಯಿಂದ ಕಾರ್ಕಳದಲ್ಲಿ ನಡೆದ ಸಂಭ್ರಮ 2024-25 ನೇ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರೋಟರಾಕ್ಟ್ ಕ್ಲಬ್ ಸುಭಾಸ್ ನಗರ ಕ್ಕೆ ಒಟ್ಟು 11 ಪ್ರಶಸ್ತಿಗಳು ಲಭಿಸಿವೆ.
ಅತ್ಯುತ್ತಮ ಕ್ಲಬ್ ಪ್ರಥಮ ಸ್ಥಾನ, ಜಿಲ್ಲಾ ಕ್ರೀಡಾಕೂಟದ ಆತಿಥ್ಯ ಪ್ರಥಮ ಸ್ಥಾನ, ಉಭಯ ಸದಸ್ಯತ್ವ, ಸಮುದಾಯ ಸೇವೆ ಪ್ರಥಮ ಸ್ಥಾನ, ವರ್ಷದ ಅತ್ಯುತ್ತಮ ಗೃಹಪತ್ರಿಕೆ ಪ್ರಶಸ್ತಿ, ಅತ್ಯುತ್ತಮ ಕ್ಲಬ್ ಸೇವೆ ಪ್ರಥಮ, ವರ್ಷದ ಅತ್ಯುತ್ತಮ ಪುರುಷ ರೋಟರಾಕ್ಟರ್ ಪ್ರವೀಣ್ ಪೂಜಾರಿ, ಅತ್ಯುತ್ತಮ ಛೇರ್ಮನ್ ರೋ. ಗ್ಲಾಡ್ಸನ್ ಕುಂದರ್, ನವರತ್ನ ರೋ. ಅವಿನಾಶ್ ಆಚಾರ್ಯ,
ಅತ್ಯುತ್ತಮ ಕಾರ್ಯದರ್ಶಿ ರೋ. ಚಿದಾನಂದ ಪೂಜಾರಿ, ಜಿಲ್ಲಾ ಯೋಜನೆಯಡಿ ಉತ್ತಮ ಆರೋಗ್ಯ ಕ್ಲಬ್ ಸೇವೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಸಂದರ್ಭ ರೋಟರಾಕ್ಟ್ ಕ್ಲಬ್ ಸುಭಾಸ್ ನಗರದ ಅಧ್ಯಕ್ಷರು, ಪದಾಧಿಕಾರಿಗಳು, ಪೂರ್ವ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.