ಪಡುಬಿದ್ರಿ : ಇಲ್ಲಿನ ಕಾಡಿಪಟ್ನ ಮೊಗವೀರ ಮಹಾಸಭಾ ಆಡಳಿತ ಮಂಡಳಿಗೆ 2025-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಹಾಲಿ ಅಧ್ಯಕ್ಷರಾದ ಅಶೋಕ್ ಸಾಲ್ಯಾನ್ ಮೂರನೇ ಅವಧಿಗೆ ಅಧ್ಯಕ್ಷರಾಗಿ ಮಹಾಸಭೆಯಲ್ಲಿ ಪುನರಾಯ್ಕೆಯಾದರು.
ಉಪಾಧ್ಯಕ್ಷರಾಗಿ ಹೇಮಚಂದ್ರ ಸಾಲ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಪಡುಬಿದ್ರಿ, ಕೋಶಾಧಿಕಾರಿಯಾಗಿ ಅಶೋಕ್ ಬಂಗೇರ, ಜೊತೆ ಕಾರ್ಯದರ್ಶಿಯಾಗಿ ಶರತ್ ಕರ್ಕೇರ ಮತ್ತು ಸತೀಶ್ ಸಾಲ್ಯಾನ್ ಜೊತೆ ಕೋಶಾಧಿಕಾರಿಯಾಗಿ ಸತೀಶ್ ಕೆ. ಸುವರ್ಣ ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ಗುರುಪ್ರಸಾದ್, ವಿಶ್ವಾಸ್ ವಿ.ಅಮೀನ್, ಸಾಗರ್ ಕರ್ಕೇರ , ಉದಯ ಸಾಲ್ಯಾನ್, ನಾರಾಯಣ್ ಎಮ್.ಕರ್ಕೇರ, ಜೀವನ್ ಎಸ್ ಸುವರ್ಣ, ಜೀವನ್ ಕೆ .ಸುವರ್ಣ, ಜಗದೀಶ್ ಬಂಗೇರ , ಮಿಥನ್ ಸಾಲ್ಯಾನ್, ಅಕ್ಷಿತ್ ಎ.ಕರ್ಕೇರ, ದೇವರಾಜ್ ಬಂಗೇರ,ತನುಜ್ ಕರ್ಕೇರ ಆಯ್ಕೆಗೊಂಡರು.