ಕಾಪು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ಘಟಕದ ವತಿಯಿಂದ ಕಾಪು ಕಂದಾಯ ತಾಲೂಕು ವ್ಯಾಪ್ತಿಯ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜು.12, ಶನಿವಾರ ಅಪರಾಹ್ನ ಗಂಟೆ 2 ಕ್ಕೆ ಕಟಪಾಡಿ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಭಾಷಣ ಸ್ಫರ್ಧೆ ಏರ್ಪಡಿಸಲಾಗಿದೆ.
ಈ ಸ್ಫರ್ಧೆಯಲ್ಲಿ "ತಂತ್ರಜ್ಞಾನದಲ್ಲಿ ಕನ್ನಡ ಭಾಷೆಯ ಮಹತ್ವ " ಮತ್ತು "ಕೃಷಿಯ ಕಡೆಗೆ ಯುವಕರು - ಸವಾಲುಗಳು ಮತ್ತು ಅವಕಾಶಗಳು" ಎಂಬ ಎರಡು ವಿಷಯಗಳಲ್ಲಿ ಸ್ಫರ್ಧಾ ದಿನ ಚೀಟಿ ಎತ್ತುವ ಮೂಲಕ ಒಂದು ವಿಷಯದಲ್ಲಿ ಭಾಷಣ ಸ್ಫರ್ಧೆ ಏರ್ಪಡುತ್ತದೆ. (ಸಮಯದ ಮಿತಿ 4+1=5 ನಿ.) ಒಂದು ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಜುಲೈ 8 ಕೊನೆಯ ದಿನವಾಗಿರುತ್ತದೆ.
ಕಸಾಪ ತಾಲೂಕು ಸಂಘಟನಾ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು[94817 60611] ಸ್ಫರ್ಧಾ ಸಂಯೋಜಕರಾಗಿದ್ದು, ಸ್ಫರ್ಧಾರ್ಥಿಗಳು ಕಾಲೇಜಿನ ದೃಢೀಕರಣ ಪತ್ರದೊಂದಿಗೆ ಆ ದಿನ ಕನಿಷ್ಠ 15 ನಿಮಿಷ ಮುಂಚಿತವಾಗಿ ಸ್ಫರ್ಧಾಸ್ಥಳದಲ್ಲಿ ಹಾಜರಿರಬೇಕು ಎಂದು ಕಾಪು ತಾಲೂಕು ಅಧ್ಯಕ್ಷರ ಪ್ರಕಟನೆ ತಿಳಿಸಿದೆ.