ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಬಂಟಕಲ್ ಸನ್ ಶೈನ್ ಲೀ ಜನ್, ಏರಿಯಾ- ಜಿ ಪದಗ್ರಹಣ

Posted On: 14-07-2025 07:25PM

ಕಾಪು : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಬಂಟಕಲ್ ಸನ್ ಶೈನ್ ಲೀ ಜನ್, ಏರಿಯಾ- ಜಿ ಇದರ ಪದಗ್ರಹಣ ಸಮಾರಂಭ ನೆರವೇರಿತು. ಎಸ್ಎನ್‌ಆರ್. ಪಿಪಿಎಫ್ ರೇಖಾ ಮರಳಿಧರನ್, ಎನ್ ವಿ ಪಿ ಏರಿಯಾ ಜಿ ಸಿಎಸ್ಐಯವರು ನೂತನ ಅಧ್ಯಕ್ಷ ಎಸ್ಎನ್‌ಆರ್. ರಮೇಶ್ ಬಂಟಕಲ್ ಅವರಿಗೆ ಪ್ರಮಾಣ ವಚನ ನೀಡಿದರು ಮುಖ್ಯ ಅತಿಥಿ ಎಸ್ಎನ್‌ಆರ್, ಸಿ ಎಸ್ ಎಲ್., ಪಿ. ಪಿ. ಎಫ್ ಚಿತ್ರ ಕುಮಾರ್ ಸಮಾಜಮುಖಿ ಕೆಲಸಗಳನ್ನು ಮಾಡಿರಿ ಎಂದು ತಿಳಿಸಿದರು.

ಪಿಪಿಎಫ್ ನವೀನ್ ಅಮೀನ್ ಕಾರ್ಯಕ್ರಮಗಳು ಜನರಿಗೆ ತಲುಪುವಂತೆ ಇರಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಾರಾಯಣ ಶೆಟ್ಟಿ ಪೊದಮಾಲೆ, ಬಂಟಕಲ್ಲು ಹಿರಿಯ ಕೃಷಿಕರು ಇವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಎಸ್ಎನ್‌ಆರ್ ವಿಘ್ನೇಶ್ ಶೆಟ್ಟಿ ಮೇಲ್ಮನೆ ಇವರು ನೂತನ ಅಧ್ಯಕ್ಷರ ಪರಿಚಯ ಮಾಡಿದರು. ನೂತನ ಅಧ್ಯಕ್ಷರಾದ ರಮೇಶ್ ಬಂಟಕಲ್ ಅನಿಸಿಕೆ ವ್ಯಕ್ತಪಡಿಸಿದರು.

ಸ್ಥಾಪಕ ಅಧ್ಯಕ್ಷ ಎಸ್ ಎಸ್ ಎನ್ ಆರ್ ಸಂದೀಪ್ ಬಂಗೇರ ಸ್ವಾಗತಿಸಿದರು. ಎಸ್ ಎನ್ ಆರ್ ವಿವೇಕ್ ಶೆಟ್ಟಿ ಸೀನಿಯರ್ ಚೇಂಬರ್ ವಾಣಿಯನ್ನು ಓದಿದರು. ಎಸ್ಎನ್‌ಆರ್ ಪ್ರಸಾದ್ ಶೆಟ್ಟಿ ವಳದೂರುರವರು ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಮನೋಜ್ ಕಡಬ ಶುಭ ಹಾರೈಸಿದರು. ಎಸ್ಎನ್‌ಆರ್. ರವೀಂದ್ರ ಪಾಟ್ಕರ್ ವಂದಿಸಿದರು.