ಕಾಪು : ಸ್ವಾತಂತ್ರ್ಯ ದಿನವು ಮಳೆ ಚಳಿ ಬಿಸಿಲನ್ನು ಲೆಕ್ಕಿಸದೆ ಸ್ವಾತಂತ್ರ್ಯದ ಗುರಿಯನ್ನು ಇರಿಸಿ ನಮ್ಮನೆಲ್ಲ ಸ್ವತಂತ್ರರನ್ನಾಗಿಸಿ ಆತ್ಮಾರ್ಪಣೆ ಮಾಡಿದ ಹೋರಾಟಗಾರರನ್ನು ನೆನಪಿಸುವ ದಿನ. ಸ್ವಾತಂತ್ರ್ಯವೆಂದರೆ ಬೆಚ್ಚನೆಯ ಅನುಭೂತಿ. ಭಾರತ ಆತ್ಮನಿರ್ಭರದೊಂದಿಗೆ ಸ್ವಾವಲಂಬನೆಯತ್ತ ಸಾಗುತ್ತಿದೆ. ಭಾರತ ಜಗದ್ಗುರುವಾಗಲಿದೆ ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಕಾಪು ತಾಲೂಕು ಆಡಳಿತದ ವತಿಯಿಂದ ಜರಗಿದ 79ನೇ ಸ್ವಾತಂತ್ರ್ಯದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಗಣ್ಯರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್. ಮಾತನಾಡಿ, ಭಾರತ ಬೆಳಕಿನ ಕಣಜವಾಗಿದೆ. ಸುವರ್ಣ ದಿನ ಸ್ವಾತಂತ್ರ್ಯ ದಿನವಾಗಿದೆ. ವೈಚಾರಿಕ ವೈಜ್ಞಾನಿಕ ಭಾರತವಾಗಬೇಕಿದೆ. ಮೌಲ್ಯಗಳನ್ನು ಇರಿಸಿ ತಂತ್ರಜ್ಞಾನ ಅಭಿವೃದ್ಧಿಯಾಗಬೇಕು.
ಇಂದಿಗೂ ಮಹಿಳೆಯರು ಆತಂಕದಲ್ಲಿದ್ದು ನಿರ್ಭೀತಿಯಿಂದ ಇರಬೇಕಾಗಿದೆ. ಭಾರತದ ಅಖಂಡತೆ ತೋರಿಸಲು ನಾವೆಲ್ಲರೂ ಪಣತೊಡೋಣ ಎಂದು ಹೇಳಿದರು.
ಸನ್ಮಾನ : ದೈವ ಪಾಡ್ದನ ಹಾಡುಗಾರ್ತಿ ಲಿಂಗು ಪಾಣಾರ, ಸಮಾಜ ಸೇವಕ ಗೋಪಾಲ ಪೂಜಾರಿ,
ಪಾಕ ಶಾಸ್ತ್ರಜ್ಞ ಗುರುರಾಜ್ ರಾವ್, ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ವಿನ್ನಿ ಗೋನ್ಸವಾಲ್ ರನ್ನು ಸನ್ಮಾನಿಸಲಾಯಿತು.
ಕಾಪು ತಾಲೂಕಿನ ಅರ್ಹ ಫಲಾನುಭವಿಗಳಿಗೆ ಕಂದಾಯ ಇಲಾಯಿಂದ ಹಕ್ಕುಪತ್ರಗಳ ವಿತರಣೆಯನ್ನು ಕಾಪು ಶಾಸಕರು ವಿತರಿಸಿದರು.
ಪೋಲಿಸ್, ಸೇವಾದಳ, ಸ್ಕೌಟ್ಸ್ ಗೈಡ್,
ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಈ ಸಂದರ್ಭ ಮಾಜಿ ಶಾಸಕ ಲಾಲಾಜಿಆರ್. ಮಂಡನ್, ಕಾಪು ಪುಸಭಾಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ ಶಿವಾನಂದ್, ಕಾಪು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕ್ರಂ ಕಾಪು, ಕಾಪು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನವೀನ್ಚಂದ್ರ ಸುವರ್ಣ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಕಾಪು ತಾಲೂಕು ಸಿಇಒ ಜೇಮ್ಸ್ ಡಿಸಿಲ್ವ, ಕಾಪು ಪುರಸಭಾಧಿಕಾರಿ ನಾಗರಾಜ್, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾಣೆ, ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಗೋಪಾಲಕೃಷ್ಣ ಗಾಂವ್ಕಂರ್, ಕ.ಸಾ.ಪ.ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಸಮಾಜ ಸೇವಕ ಗೋಪಾಲ ಪೂಜಾರಿ, ಪುರಸಭಾ ಸದಸ್ಯರು, ಕಾಪು ತಾಲೂಕಿನ ವಿವಿಧ ಠಾಣೆಗಳ ಠಾಣಾಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ಯುವಜನ ಮತ್ತು ಕ್ರೀಡಾ ಇಲಾಖೆಯ ತಾಲೂಕು ಅಧಿಕಾರಿ ರಿತೇಶ್ ಕುಮಾರ್ ಸ್ವಾಗತಿಸಿದರು. ಪಿ.ಡಿ.ಒ ಶ್ರೀನಿವಾಸ ವಂದಿಸಿದರು.