ಅವರಾಲು ಮಟ್ಟುವಿನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜಯಂತಿ ಆಚರಣೆ
Posted On:
07-09-2025 09:06PM
ಪಡುಬಿದ್ರಿ : ಶ್ರೀ ನಾರಾಯಣಗುರು ಸೇವಾ ಸಮಿತಿ ಅವರಾಲು ಮಟ್ಟು ನೇತೃತ್ವದಲ್ಲಿ ಅವರಾಲು ಮಟ್ಟು ನಾರಾಯಣ ಪೂಜಾರಿ ಇವರ ಮನೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜಯಂತಿಯನ್ನು ಆಚರಿಸಲಾಯಿತು.
ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಈ ಸಂದರ್ಭ ಅವರಾಲು ಮಟ್ಟುವಿನ ಬಿಲ್ಲವ ಸಮಾಜಕ್ಕಾಗಿ ಶ್ರಮಿಸಿದ
ಕುಂದಾಪುರ ಮೆಜಿಸ್ಟ್ರೇಟ್ ಕೋಟ್೯ನಲ್ಲಿ
ಶಿರಸ್ತೇದಾರ್ ಆಗಿದ್ದ ನಿವೃತ್ತ ಜೀವನ ನಡೆಸುತ್ತಿರುವ ಮದುಸೂದನ್ ಕೋಟ್ಯಾನ್ ರನ್ನು ಶ್ರೀ ನಾರಾಯಣಗುರು ಸೇವಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಸಮಾಜ ಬಾಂಧವರು ಉಪಸ್ಥಿತರಿದ್ದರು.