ಶಿರ್ವ : ಯೂತ್ ಬಿಲ್ಲವಾಸ್ ಮೂಡುಬೆಳ್ಳೆ ತಂಡದ ವತಿಯಿಂದ 171ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಮೂಡುಬೆಳ್ಳೆ ಗೀತಾ ಮಂದಿರದಲ್ಲಿ ನಡೆಯಿತು.
ನೂರಾರು ಬಿಲ್ಲವ ಭಾಂದವರು ಗುರು ಪೂಜೆಯಲ್ಲಿ ಭಾಗವಹಿಸಿ ನಾರಾಯಣಗುರುಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಹಿರಿಯರಾದ ಸಂತೋಷ್ ಪೂಜಾರಿ, ಸುಧಾಕರ್ ಪೂಜಾರಿ ಮಡಿಕೆಟ್ಟು,ಯೂತ್ ಬಿಲ್ಲವಾಸ್ ಮೂಡುಬೆಳ್ಳೆ ಇದರ ಅಧ್ಯಕ್ಷರಾದ ತಿಲಕ್ ಪೂಜಾರಿ ಭದ್ರಮ, ಗೌರವಾಧ್ಯಕ್ಷ ದಿನೇಶ್ ಸುವರ್ಣ ಮಡಿಕೆಟ್ಟು, ಪ್ರಧಾನ ಕಾರ್ಯದರ್ಶಿ ರಾಕೇಶ್ ಪೂಜಾರಿ ವರ್ವಾಡಿ, ಮಹಿಳಾ ಘಟಕ ಅಧ್ಯಕ್ಷೆ ಧನಲಕ್ಷ್ಮೀ ಸುಧಾಕರ್ ಪೂಜಾರಿ, ಉಪಾಧ್ಯಕ್ಷೆ ಸುನೀತಾ ಪೂಜಾರಿ ಹಾಗೂ ಯೂತ್ ಬಿಲ್ಲವಾಸ್ ಮೂಡುಬೆಳ್ಳೆ ಇದರ ಸದಸ್ಯರು ಉಪಸ್ಥಿತರಿದ್ದರು.