ವಿಶ್ವಕರ್ಮ ಸಮಾಜದ ಸಂಘ ಸಂಸ್ಥೆಗಳಿಂದ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪಡುಕುತ್ಯಾರ್ ಗೆ ಪಾದಯಾತ್ರೆ
Posted On:
09-09-2025 11:54AM
ಕಾಪು : ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ಕಡಂಬು ಮಟ್ಟಾರ್ ಮತ್ತು ಕಾಳಿಕಾಂಬಾ ಮಹಿಳಾ ಮಂಡಳಿ ಕಡಂಬು ಇದರ ಜಂಟಿ ಆಶ್ರಯದಲ್ಲಿ ಶ್ರೀ ಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪಡುಕುತ್ಯಾರ್ ಗೆ ಪಾದಯಾತ್ರೆ ನಡೆಯಿತು.
ಸಂಘದ ಅಧ್ಯಕ್ಷರಾದ ಮಂಜುನಾಥ್ ಆಚಾರ್ಯರ ಮುಂದಾಳತ್ವದಲ್ಲಿ ಸುಮಾರು 45 ಜನರನ್ನು ಒಳಗೊಂಡ ಬಾಂಧವರ ತಂಡ 20 ಕಿ.ಮೀ.ಗಳ ಸುದೀರ್ಘ ಕಾಲ್ನಡಿಗೆ ಮಾಡಿದರು.
ಪಾದಯಾತ್ರೆಯ ಸಂದರ್ಭ ಶಿರ್ವ ಶ್ರೀಮಾಹಮ್ಮಾಯಿ ಅಮ್ಮನ ಸನ್ನಿಧಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕುತ್ಯಾರು, ಹಾಗೂ ಇತರ ದೇವಾಲಯಗಳಿಗೆ ಭೇಟಿ ಕೊಡಲಾಯಿತು.
ಪಡುಕುತ್ಯಾರ್ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಕ್ಕೆ ತಲುಪಿದ ನಂತರ ಗುರುಪಾದ ಪೂಜೆ ಮಾಡಿ ಅನುಗ್ರಹ ಮಂತ್ರಾಕ್ಷತೆ ಪಡೆಯುವ ಮೂಲಕ ಪಾದಯಾತ್ರೆ ಸಂಪನ್ನಗೊಂಡಿತು.
ಈ ಸಂದರ್ಭ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಮಹಿಳಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.