ಉಡುಪಿ : ಸಂತೆಕಟ್ಟೆ ಬಿಲ್ಲವರ ಸೇವಾಸಂಘ ನಯಂಪಳ್ಳಿ - ಸಂತೆಕಟ್ಟೆ ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಭಜನೆ ಹಾಗು ಗುರುಪೂಜೆಯು ಜರಗಿತು.
ಸನ್ಮಾನ : ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ವಿಧುಷಿ ದೀಕ್ಷಾ ವಿ., ಶಿಕ್ಷಣ ಕ್ಷೇತ್ರದಲ್ಲಿ ಅಬಾಕಸ್ ಸ್ಪರ್ಧೆ ಯಲ್ಲಿ ಹಲವಾರು ಪ್ರಶಸ್ತಿ ಗಳಿಸಿದ ಕುಮಾರಿ ಜಿಶ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ದಿನೇಶ್ ಪೈ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂಧರ್ಭ ದಲ್ಲಿ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ನಿಕಟಪೂರ್ವ ಶಾಸಕರಾದ ಕೆ. ರಘುಪತಿ ಭಟ್, ಬ್ರಹ್ಮಾವರ ಬಿಲ್ಲವ ಸಂಘದ ಅಧ್ಯಕ್ಷರಾದ ಬಿ. ಎನ್. ಶಂಕರ್ ಪೂಜಾರಿ, ಉಡುಪಿ ಬಿಲ್ಲವ ಯುವವೇದಿಕೆಯ ಅಧ್ಯಕ್ಷರಾದ ಪ್ರವೀಣ್ ಎಮ್. ಪೂಜಾರಿ, ಅಭಿವೃದ್ಧಿ ಸಮಿತಿಯ ಗೌ. ಅಧ್ಯಕ್ಷರಾದ ಶಾಮ್ ಕೆ. ಪೂಜಾರಿ, ಸಂಘದ ಗೌ. ಅಧ್ಯಕ್ಷರಾದ ಭಾಸ್ಕರ್ ಕೆ. ಜತ್ತನ್, ಅಧ್ಯಕ್ಷರಾದ ಶೇಕರ್ ಗುಜ್ಜರ್ ಬೆಟ್ಟು, ಉಪಾಧ್ಯಕ್ಷರುಗಳಾದ ವಿಠ್ಠಲ ಪೂಜಾರಿ, ಟಿ. ರಾಮ ಪೂಜಾರಿ, ಗಣೇಶ್ ಕೋಟ್ಯಾನ್, ಹೇಮರಾಜ ಅಮೀನ್, ಜಗದೀಶ್ ಕೆಮ್ಮಣ್ಣು, ಪ್ರ. ಕಾರ್ಯದರ್ಶಿ ಮುರಳೀಧರ ಸುವರ್ಣ, ಕೋಶಾಧಿಕಾರಿ ಉಮೇಶ್ ಪೂಜಾರಿ, ಪ್ರಧಾನ ಅರ್ಚಕರಾದ ಶಂಕರ್ ಪೂಜಾರಿ, ಸಹಾಯಕರಾದ ಉಮೇಶ್ ಜತ್ತನ್, ಸಂಘದ ಸದಸ್ಯರಾದ ಗೋಪಾಲ್ ಪೂಜಾರಿ, ಸುರೇಶ್ ಮೂಡುಬೆಟ್ಟು, ಗೋವರ್ಧನ್ ಜತ್ತನ್, ಮಹಾಬಲ ಪೂಜಾರಿ, ಸುರೇಶ್ ಸುವರ್ಣ, ಮಿತ್ರ ಕುಮಾರ್, ಸುಧಾಕರ್ ಕೋಟ್ಯಾನ್, ಸುರೇಶ್ ಅಮೀನ್, ಯೋಗೀಶ್ ಪೂಜಾರಿ, ಸುರೇಶ್ ಸಿ. ಎಸ್. ಕೆ, ಮಾಧವ ಸನಿಲ್ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಉಷಾ ವಸಂತ್, ಕಾರ್ಯದರ್ಶಿ ವಂದನಾ ಸುರೇಶ್ ಮತ್ತು ಮಹಿಳಾ ಘಟಕದ ಸದಸ್ಯೆಯರು ಉಪಸ್ಥಿತರಿದ್ದರು.