ಕಾಪು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ 2024 - 25ನೇ ಒಕ್ಕೂಟದ 39ನೆಯ ವಾರ್ಷಿಕ ಸಾಮಾನ್ಯ ಸಭೆಯು ಸೆ. 20 ರಂದು ಕೊರ್ಡೆಲ್ ಹಾಲ್ ಚಚ್೯ಗೇಟ್ ಕುಲಶೇಖರ ಮಂಗಳೂರು ಇಲ್ಲಿ ಜರಗಿತು.
ಈ ಸಭೆಯಲ್ಲಿ ಪ್ರತಿಷ್ಠಿತ ದಕ್ಷಿಣ ಕನ್ನಡ ಸರಕಾರಿ ಒಕ್ಕೂಟದ 2024 -25 ನೇ ಸಾಲಿನ ಒಕ್ಕೂಟದ ಉತ್ತಮ ಕೃತಕ ಗರ್ಭಧಾರಣಾ ಪ್ರಶಸ್ತಿಯನ್ನು ಒಕ್ಕೂಟದ ಅಧ್ಯಕ್ಷರಾದ ಕೊಡವೂರು ರವಿರಾಜ ಹೆಗ್ಡೆ ಇವರು ಕಾಪು ತಾಲೂಕಿನ ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಥಮ ಚಿಕಿತ್ಸೆ ಹಾಗೂ ಪಶುಸಂಗೋಪನೆಗಾರರಾದ ಸುಬ್ರಹ್ಮಣ್ಯ ಎನ್ ಭಟ್ ರವರಿಗೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಉದಯ ಎಸ್ ಕೋಟ್ಯಾನ್, ಕೆಎಂಎಫ್ ನಿರ್ದೇಶಕರಾದ ಡಾ. ದೇವಿ ಪ್ರಸಾದ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾದ ವಿವೇಕ್ ಡಿ., ವ್ಯವಸ್ಥಾಪಕರಾದ ಡಾ. ರವಿರಾಜ ಉಡುಪ, ನಿರ್ದೇಶಕರುಗಳು, ಉಪ ವ್ಯವಸ್ಥಾಪಕರುಗಳು, ಸಿಬ್ಬಂದಿ ವರ್ಗ ಹಾಗೂ ಇನ್ನಂಜೆ ಹಾಲು ಸಹಕಾರಿ ಸಂಘದ ಅಧ್ಯಕ್ಷರಾದ ಶಿವರಾಮ ಶೆಟ್ಟಿಯವರು ಉಪಸ್ಥಿತರಿದ್ದರು.