ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಫೆಬ್ರವರಿ 1 ರಂದು ನಡೆದ 30ನೇ ರಾಜ್ಯಮಟ್ಟದ ಅಂತರ್ ಡೋಜೋ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಾಪು ತಾಲೂಕಿನ ಇನ್ನಂಜೆಯ ಶಿವಾನಿ ಭಟ್ ಅವರು ಎಂಟು ವರ್ಷದ ಒಳಗಿನ ವೈಯುಕ್ತಿಕ ಕಟಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿರುತ್ತಾರೆ.
ಇನ್ನಂಜೆ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ಇನ್ನಂಜೆ ಮಯೂರ್ ಭಟ್ ಮತ್ತು ಆಶಾ ಭಟ್ ದಂಪತಿಯ ಪುತ್ರಿಯಾಗಿದ್ದು. ಕಟಪಾಡಿ ಸುರೇಶ್ ಆಚಾರ್ಯ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ನಮ್ಮ ಕಾಪು