ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದ ಹಿರಿಯರು ಸಂಸ್ಥಾಪಿಸಿ ಪೂಜಿಸಿ ಭಜಿಸಿಕೊಂಡು ಬರುತ್ತಿರುವ ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಳವು 1942 ರಲ್ಲಿ ಪ್ರತಿಷ್ಠಾಪನೆಗೊಂಡಿದ್ದು, 2019 ರಲ್ಲಿ ಶ್ರೀ ಕ್ಷೇತ್ರದ ಸಂಪೂರ್ಣ ಜೀರ್ಣೋದ್ದಾರ ಕಾರ್ಯ ನಡೆದು, ಶಿಲಾಮಯ ಗರ್ಭಗುಡಿ, ಸುತ್ತುಪೌಳಿ ಮತ್ತು ಸಂಪೂರ್ಣ ತಾಮ್ರ ಚಾವಣಿಯ ಜೊತೆಗೆ ಶ್ರೀ ಸಿದ್ದಿವಿನಾಯಕ, ಶ್ರೀ ಸುಬ್ರಮಣ್ಯ, ಶ್ರೀ ರಾಮ ಮಂದಿರದೊಂದಿಗೆ ಸಪರಿವಾರ ಸಾನಿಧ್ಯಗಳ ಪುನರ್ ಪ್ರತಿಷ್ಠೆ, ಧಾರ್ಮಿಕ ಅನುಷ್ಠಾನಗಳು 2019 ಮೇ 7 ರಿಂದ 18 ರ ಪರ್ಯಂತ, ಸಮಾಜದ ಗುರುವರ್ಯರಾದ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ರವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಸಮಾಜದ ಹಿರಿಯ ವೈದಿಕರ ನೇತೃತ್ವದಲ್ಲಿ ಸಮಾಜ ಭಾಂದವರ ಶ್ರದ್ದಾ ಭಕ್ತಿ ತನು ಮನ ಧನಗಳ ಸಹಕಾರದಿಂದ ಅದ್ದೂರಿಯಾಗಿ ನಡೆದಿರುವುದು ಒಂದು ಇತಿಹಾಸವೇ ಆಗಿದೆ.
ಶ್ರೀ ದೇವಳದ ಪ್ರತಿಷ್ಠಾ ವರ್ದನ್ತ್ಯುತ್ಸವ ತಾರೀಕು 03/04/2020 ರಂದು ನಡೆಯಲಿದೆ..
ಈ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ
ನಮ್ಮ ಕಾಪು