ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ವಿದ್ಯಾರ್ಥಿಯಿಂದ ಫ್ಯಾಷನ್ ಲೋಕಕ್ಕೆ ಹೊಸ ಮಾದರಿಯ ಹೆಜ್ಜೆ, ಹಾಸನದಲ್ಲಿ ತನ್ನದೇ ಛಾಪು ಮೂಡಿಸಲಿರುವ ನಮ್ಮ ಕಾಪುವಿನ ಯುವಕ.
ಸ್ಯಾಮುವೆಲ್ ಅಕ್ವಿಲ್ ಸೋನ್ಸ್ ಇವರು ಕಾಪು-ಪಾಂಗಾಳದವರು.
ಇಂದಿರಾ ಶಿವರಾವ್ ಪಾಲಿಟೆಕ್ನಿಕ್- ಮೂಡುಪೆರಂಪಳ್ಳಿ. ಕಾಲೇಜಿನಲ್ಲಿ ತೃತೀಯ ವರುಷದ ಫ್ಯಾಷನ್ ಟೆಕ್ನಾಲೊಜಿಯ ವಿದ್ಯಾರ್ಥಿಯಾದ ಇವರು ಕಸದಿಂದ ರಸ ಆಧಾರಿತ ವಿಶಿಷ್ಟ ಉಡುಗೆಯನ್ನು ತಯಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರೆ.
ಮದುವೆ ಸಮಾರಂಭಗಳಲ್ಲಿ ಕುಡಿಯಲು ಬಳಸುವ ನೀರಿನ ಬಾಟಲಿಗಳನ್ನು ಸಂಗ್ರಹಿಸಿ ಅದರ ಎಲ್ಲಾ ಭಾಗಗಳನ್ನು ಬಳಸಿ ಅದರಿಂದ ಉಡಿಗೆಯನ್ನು ತಯಾರಿಸಿದ್ದಾರೆ.
ಮುಂಬರುವ ಆಗಸ್ಟ್ ತಿಂಗಳಿನಲ್ಲಿ ಹಾಸನದಲ್ಲಿ ನಡೆಯುವ "ನಾನು ಕಸವಲ್ಲ ರಸ" -ಸ್ವಚ್ಛತೆಯೆಡೆಗೆ ನಮ್ಮ ನಡೆ ಎಂಬ ಕಾರ್ಯಕ್ರಮದಲ್ಲಿ ತನ್ನ ಉಡುಗೆಯ ಪ್ರದರ್ಶನ ನೀಡಲಿದ್ದಾರೆ.
ಮನಸ್ಸಿದ್ದರೆ ಮಾರ್ಗ ಎನ್ನುವ ಹಾಗೆ, ಯಾರು ಏನೇ ಹೇಳಿದರೂ ತನ್ನ ಕೆಲಸದಲ್ಲಿ ನಂಬಿಕೆ,ಶ್ರಮ ಹಾಗೂ ಸಂಸ್ಥೆಯ ಸಹಕಾರ ಇದರಿಂದ ತನಗೆ ಬೆಂಬಲ, ಪ್ರೋತ್ಸಾಹ ಎನ್ನುತ್ತಾರೆ.
ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಈ ಕಾಲದಲ್ಲಿ ಕಸವನ್ನೇ ರಸವನ್ನಾಗಿಸಿದ ಇವರ ಈ ಸಾಧನೆಗೆ ಮೆಚ್ಚಲೇಬೇಕು. ಶಹಬಾಷ್ ಗಿರಿ ನೀಡಲೇಬೇಕು...!!
ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಾದನೆಗಳನ್ನು ಮಾಡಿ ಹೆತ್ತವರಿಗೆ, ಕಲಿತ ಶಾಲೆಗೆ ಹುಟ್ಟಿದ ಊರಿಗೆ ಕೀರ್ತಿಯನ್ನು ತರಲೆಂಬುದೇ ನಮ್ಮೆಲ್ಲರ ಆಶಯ..
ನಿಮ್ಮ ಈ ಸಾದನೆಗೆ ಅಭಿನಂದನೆಗಳು : ನಮ್ಮ ಕಾಪು ತಂಡ
ಧನ್ಯವಾದಗಳು