ಶ್ರೀ ಆದಿ ಆಲಡೆ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಪಾಂಗಳ ಇಲ್ಲಿ ವರ್ಷಂಪ್ರತಿ ಜರಗುವ ಪಾಂಗಳ ಆದಿ ಆಲಡೆ ಶ್ರೀ ಬ್ರಹ್ಮಲಿಂಗೇಶ್ವರ ದೇವರು ಹಾಗೂ ಪರಿವಾರ ದೈವಗಳ "ಆಲಡೆ ಮಹೋತ್ಸವ"ವು ಇದೆ ಬರುವ ತಾರೀಕು 08-03-2020 ನೇ ರವಿವಾರದಂದು ಜರಗಲಿರುವುದು.
ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ, ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಹಾಗೂ ಶ್ರೀ ಧರ್ಮ ದೈವಗಳ ಕೃಪೆಗೆ ಪಾತ್ರರಾಗಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ತರಾಗಬೇಕಾಗಿ ವಿನಂತಿ
ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮಗಳು ಈ ಕೆಳಗಿನಂತಿವೆ.
08-03-2020 ರವಿವಾರದಂದು ಬೆಳಿಗ್ಗೆ 11:30 ಕ್ಕೆ ಧ್ವಜಾರೋಹಣ, 12:30 ಕ್ಕೆ ಮಹಾಪೂಜೆ, 12:45 ಕ್ಕೆ ಬ್ರಾಹ್ಮಣ ಸುವಾಸಿನಿ ಆರಾಧನೆ, ಗಂಟೆ 01:00 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 08:30 ಕ್ಕೆ ಭಂಡಾರ ಚಾವಡಿಯಿಂದ ಪರಿವಾರ ದೈವಗಳ ಭಂಡಾರ ಹೊರಡುವುದು, 09:30 ಕ್ಕೆ ಬೈಗಿನ ಬಲಿ, ರಾತ್ರಿ 11:00 ಕ್ಕೆ ಕುಮಾರ ದರ್ಶನ, ರಾತ್ರಿ 01:00 ಕ್ಕೆ ರಂಗಪೂಜೆ, ರಾತ್ರಿ 02:30 ಕ್ಕೆ ಬ್ರಹ್ಮಮಂಡಲ, ರಾತ್ರಿ 04:30 ರಿಂದ ತುಲಾಭಾರ ಸೇವೆ,
ತಾರೀಕು 09-03-2020ನೇ ಸೋಮವಾರ ಬೆಳಿಗ್ಗೆ 11:00 ಕ್ಕೆ ಮಹಾಪೂಜೆ, ಸಂಜೆ 07:00 ಕ್ಕೆ ಬೈಗಿನ ಬಲಿ, ರಾತ್ರಿ 09:00 ಕ್ಕೆ ದೂಳು ಮಂಡಲ, ನಂತರ ಬೂತಬಲಿ, ಶಯನೋತ್ಸವ,
ತಾರೀಕು 10-03-2020 ನೇ ಮಂಗಳವಾರ ಬೆಳಿಗ್ಗೆ 07:00 ಕ್ಕೆ ಕಾವೊಟೋದ್ಘಾಟನೆ ನಂತರ ಮಹಾಪೂಜೆ, ಸಾಯಂಕಾಲ 05:00 ಕ್ಕೆ ಬಲಿ ಹೊರಟು ಅವಭ್ರತ ಸ್ನಾನ, ಕಟ್ಟೆಪೂಜೆ, ರಾತ್ರಿ ದ್ವಜ ಅವರೋಹಣ. ಹೀಗೆ ಧಾರ್ಮಿಕ ಕಾರ್ಯಕ್ರಮಗಳು ಕ್ರಮವಾಗಿ ನಡೆಯಲಿವೆ..
ನಮ್ಮ ಕಾಪು