ಅಂದು ಕೊರೊನ ಲಾಕ್ಡೌನ್ ಸಮಯ ಇಂದು ತಾರಸಿ ತುಂಬಾ ತರಕಾರಿಮಯ...
Thumbnail
ಕಾಪು : ಕೊರೊನ ಸಮಯ ಕಷ್ಟಮಯವಾಗಿದ್ದಂತು ನಿಜ. ಆದರೆ ಆ ಸಮಯವನ್ನು ಒಂದಷ್ಟು ಉಪಯುಕ್ತವಾಗಿಸಿಕೊಂಡು ಇಷ್ಟಮಯವಾಗಿಸಿ ತರಕಾರಿಗಳನ್ನು ಬೆಳೆಸಿದ ಕಟಪಾಡಿಯ ನಾಟಕ ಕಲಾವಿದ ನಾಗೇಶ್ ಕಾಮತ್ ಮತ್ತು ಅವರ ಮಗ ಬಾಲ ಜಾದುಗಾರ ಪ್ರಥಮ್ ಕಾಮತ್. ಬಹಳಷ್ಟು ಮಂದಿಗೆ ತರಕಾರಿ ಬೆಳೆಯಲು ಜಾಗದ ಸಮಸ್ಯೆ ಎದುರಾಗಬಹುದು ಆದರೆ ಇವರು ಆಯ್ದುಕೊಂಡದ್ದು ಮನೆಯ ತಾರಸಿ ಹಾಗೂ ಅಂಗಳ. ಕೊರೋನ ಸಮಯದಲ್ಲಿ ಮೊದಲು ಬೇಸತ್ತು ಏನಾದರೂ ಸಾಧನೆ ಮಾಡಬೇಕೆಂದು ತಮ್ಮಲ್ಲಿರುವ ತೋಟದಲ್ಲಿ ಗಿಡಗಳನ್ನು ನೆಟ್ಟರು ಆದರೆ ನೆರಳು ಜಾಸ್ತಿ ಇದ್ದ ಕಾರಣ ಯಾವುದೇ ಫಲ ಕೊಡಲಿಲ್ಲ ಆನಂತರ ಛಲಬಿಡದೆ ತಮ್ಮ ಮನೆಯ ತಾರಸಿಯಲ್ಲಿ ಹಳೆ ಪ್ಲಾಸ್ಟಿಕ್ ಚೀಲ ಸಿಮೆಂಟ್ ಚೀಲಗಳಲ್ಲಿ ಕೆಂಪು ಮಣ್ಣು ತುಂಬಿ ಸಾವಯವ ಗೊಬ್ಬರ ತಯಾರಿಸಿ ಬೆಂಡೆ, ಮಟ್ಟುಗುಳ್ಳ, ಕುಂಬಳಕಾಯಿ, ಹರಿವೆ ಸೊಪ್ಪು, ಬಸಳೆ ಸೊಪ್ಪು, ಟೊಮೆಟೊ, ಮೆಣಸಿನಕಾಯಿ, ಕಲ್ಲಂಗಡಿ ಇನ್ನಿತರ ಮನೆಗೆ ಬೇಕಾಗುವ ತರಕಾರಿಗಳನ್ನು ಅತಿ ಕಡಿಮೆ ಖರ್ಚಿನಲ್ಲಿ ಬೆಳೆಸುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ ಒಂದು ಅರ್ಧ ಗಂಟೆ ಗಿಡದ ನಿರ್ವಹಣೆಯ ಕೆಲಸ ಹಾಗೆಯೇ ಸಂಜೆ ಗಿಡಕ್ಕೆ ಒಂದು ಗಂಟೆ ನೀರು ಉಣಿಸುವ ಕಾರ್ಯವನ್ನು ತಂದೆ ಮತ್ತು ಮಗ ನಿರ್ವಹಿಸುತ್ತಿದ್ದಾರೆ. ಇದೀಗ ಡಿಸೆಂಬರ್ ಜನವರಿಯಲ್ಲಿ ನೆಟ್ಟ ಗಿಡಗಳು ಒಳ್ಳೆಯ ಕಾಯಿಗಳನ್ನು ಕೊಟ್ಟು ಮನೆಗೆ ಬೇಕಾದಷ್ಟು ತರಕಾರಿ ಗಳನ್ನೂ ಬೆಳೆಸಿ ಇತರರಿಗೂ ಕೊಡುವಷ್ಟು ತರಕಾರಿ ಬೆಳೆಯುತ್ತಿದ್ದಾರೆ. ತಾರಸಿ ಕೃಷಿ ಮಾಡುವುದರಿಂದ ದೇಹಕ್ಕೆ ವ್ಯಾಯಾಮ ಅಲ್ಲದೆ ಮನಸಿಗೆ ಖುಷಿಯಾಗುತ್ತೆ ಅಲ್ಲದೆ ಮನೆಯಲ್ಲೇ ಬೆಳೆದ ತಾಜಾ ಸಾವಯವ ತರಕಾರಿ ತಿನ್ನುವುದರಿಂದ ಆರೋಗ್ಯದ ವಿಚಾರದಲ್ಲೂ ಬಹಳ ಉತ್ತಮ ಎಂದು‌ ಹೇಳುತ್ತಾರೆ ನಾಗೇಶ್ ಕಾಮತ್. ಇವರ ಈ ವ್ಯವಸ್ಥೆ ಇತರರಿಗೂ ಮಾದರಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ನಾಗೇಶ್ ಕಾಮತ್ : 9886432197
Additional image Additional image Additional image
12 Apr 2021, 10:58 AM
Category: Kaup
Tags: